ಮಡಿಕೇರಿ: ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪಿಗೆ ವಿರಾಜಪೇಟೆಯ ಎರಡನೇ ಅಪರ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ತಲಾ 20 ವರ್ಷ ಸಜೆ (ಒಟ್ಟು 40 ವರ್ಷ) ಹಾಗೂ ತಲಾ 20,000 ಸಾವಿರ ರೂ.ದಂಡ ವಿಧಿಸಿದೆ.
ಬೊಳ್ಳುಮಾಡು ಗ್ರಾಮದ ರಮೇಶ್ ಎಂಬುವರ ಕಾಫಿ ತೋಟದ ಮನೆಯಲ್ಲಿದ್ದ ವಸಂತ(35) ಎಂಬಾತನು 2019 ರ ಏಪ್ರಿಲ್ 25 ರಂದು ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ರಮಾ ಅವರು, ಐಪಿಸಿ 376(ಐ) ಅಪರಾಧಿಗೆ 20 ವರ್ಷ ಸಜೆ ಹಾಗೂ 20,000 ರೂ.ದಂಡ ಹಾಗೂ ಪೋಕ್ಸೋ ಕಾಯಿದೆ 376 (ಐ) ಅಡಿ 20 ವರ್ಷ ಸಜೆ, 20,000 ರೂ.ದಂಡ ವಿಧಿಸಿದ್ದಾರೆ.
20 ವರ್ಷಗಳ ಪ್ರತ್ಯೇಕ ಸಜೆಯನ್ನು ಏಕಕಾಲದಲ್ಲಿ ಅನುಭವಿಸಬೇಕು. ದಂಡದ ರೂಪದಲ್ಲಿ ಬರುವ 40,000 ರೂ, ನಲ್ಲಿ30,000 ಸಂತ್ರಸ್ತೆಗೆ ಪಾವತಿಸುವಂತೆ ತೀರ್ಪಿನಲ್ಲಿಆದೇಶಿಸಿದ್ದಾರೆ.
ಅತ್ಯಾಚಾರ ಆರೋಪಿಗೆ 40 ವರ್ಷ ಜೈಲು
Follow Us