newsics.com
ಹಾವೇರಿ: ತುಂಗಭದ್ರಾ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಇಬ್ಬರು ಯುವಕರು ಕೊಚ್ಚಿಹೋಗಿದ್ದಾರೆ.
ಸೋಮವಾರ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಇಬ್ಬರು ಯುವಕರ ಜತೆಗಿದ್ದ ಎರಡು ಎತ್ತುಗಳೂ ಚಕ್ಕಡಿಸಹಿತ ಕೊಚ್ಚಿಹೋಗಿವೆ. ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪೂರ ಗ್ರಾಮದ ಜಗಪ್ಪ ಮತ್ತು ಬೆಟ್ಟಪ್ಪ ನದಿಯಲ್ಲಿ ಕೊಚ್ಚಿಹೋದ ಯುವಕರು ಎಂದು ತಿಳಿದುಬಂದಿದೆ.
ಉಡುಪಿಯಲ್ಲಿ ಶತಮಾನದ ಭೀಕರ ಮಳೆ: ತಗ್ಗದ ಪ್ರವಾಹ
ಎತ್ತಿನ ಬಂಡಿ ತೆಗೆದುಕೊಂಡು ನದಿಯಲ್ಲಿ ಮರಳು ತುಂಬಲು ಹೋದಾಗ ಏಕಾಏಕಿ ನದಿ ನೀರು ರಭಸವಾಗಿ ಹರಿದುಬಂದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ರಾಣೆಬೆನ್ನೂರು ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊರೋನಾ ವಿಚಾರಕ್ಕೆ ಜಗಳ, ನವದಂಪತಿ ಆತ್ಮಹತ್ಯೆ