Wednesday, February 1, 2023

ಪೇಜಾವರ ಶ್ರೀಗಳ ಸ್ಥಿತಿ ಸುಧಾರಣೆ; ದೀರ್ಘ ಕಾಲದ ಚಿಕಿತ್ಸೆ ಅಗತ್ಯ

Follow Us

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಸಾಕಷ್ಟು ಚೇತರಿಸಿಕೊಂಡಿದ್ದು, ಅವರಿಗೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳಿಗೆ ಎಲ್ಲ ರೀತಿಯ ಅಗತ್ಯ ಪರೀಕ್ಷೆಗಳನ್ನೂ ಮಾಡಲಾಗಿದೆ. ಎಲ್ಲವೂ ನಾರ್ಮಲ್ ಆಗಿದೆ‌. ಅವರಿಗೆ ನ್ಯುಮೋನಿಯಾ ಹೊರತುಪಡಿಸಿ ಬೇರೆ ಯಾವುದೇ ತೊಂದರೆ ಇಲ್ಲ. ಶ್ರೀಗಳಿಗೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದೆ ಎಂದರು.

ಬೆಂಗಳೂರಿನ ಇಬ್ಬರು ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ದೆಹಲಿ ಆಸ್ಪತ್ರೆ ವೈದ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು..

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ಸಚಿವಾಲಯ ‌ನಮ್ಮ ಸಂಪರ್ಕದಲ್ಲಿದ್ದು, ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ‌ ಎಂದು ಅವಿನಾಶ್ ವಿವರಿಸಿದರು.

ಶ್ರೀಗಳನ್ನು ಎಲ್ಲಿಗೂ‌ ಶಿಫ್ಟ್ ಮಾಡುತ್ತಿಲ್ಲ. ಕೆಎಂಸಿಯಲ್ಲೆ ಚಿಕಿತ್ಸೆ ಮುಂದುವರಿಯಲಿದೆ ಎಂದರು.

ಬೆಂಗಳೂರಿನ ಮಣಿಪಾಲ ಸಮೂಹ ಆಸ್ಪತ್ರೆ ತುರ್ತು ಚಿಕಿತ್ಸೆ ವಿಭಾಗ, ಶ್ವಾಸಕೋಶ ತಜ್ಞ ವೈದ್ಯರಾದ ಡಾ‌.ರಾಜೇಶ್ ಶೆಟ್ಟಿ, ಡಾ.ಸತ್ಯನಾರಾಯಣ ಮಾತನಾಡಿ, ಪೇಜಾವರ ಶ್ರೀಗಳಿಗೆ ನಿಧಾನವಾಗಿ ಪ್ರಜ್ಞೆ ಮರುಕಳಿಸುತ್ತಿದೆ, ವಯಸ್ಸಾಗಿದ್ದರಿಂದ ಆರೋಗ್ಯ ಸುಧಾರಣೆಗೆ ಇನ್ನಷ್ಟು ಸಮಯ ಬೇಕು. ದೇಹದ ಎಲ್ಲ ಅಂಗಾಂಗಗಳೂ ಚೆನ್ನಾಗಿವೆ. ಆದರೆ ಶ್ವಾಸಕೋಶದಲ್ಲಿ ಮಾತ್ರ ಸೋಂಕು ಇದೆ. ನಿಧಾನವಾಗಿ ಸೊಂಕು ನಿವಾರಣೆ ಆಗಬೇಕಿದೆ. ವೆಂಟಿಲೇಟರ್ ನಲ್ಲೆ ಚಿಕಿತ್ಸೆ‌ ನಡೆಯುತ್ತಿದೆ ಎಂದರು.

ಮತ್ತಷ್ಟು ಸುದ್ದಿಗಳು

vertical

Latest News

ಬಾಂಬೆ ಸಿಸ್ಟರ್ಸ್ ಖ್ಯಾತಿಯ ವಿದುಷಿ ಸಿ. ಲಲಿತ ಇನ್ನಿಲ್ಲ

newsics.com ಮುಂಬೈ: ಸುಶ್ರಾವ್ಯ ಕರ್ನಾಟಕ ಸಂಗೀತಕ್ಕೆ ಹೆಸರಾದ ಬಾಂಬೆ ಸಹೋದರಿಯರು ಖ್ಯಾತಿಯ ಸಿ. ಸರೋಜಾ - ಸಿ. ಲಲಿತಾ ಜೋಡಿಯಲ್ಲಿ ಕಿರಿಯರಾದ ಸಿ. ಲಲಿತಾ (85) ಮಂಗಳವಾರ...

ಕಾನೂನು ತಜ್ಞ, ಮಾಜಿ ಸಚಿವ ಶಾಂತಿ ಭೂಷಣ್ ನಿಧನ

newsics.com ನವದೆಹಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) ಮಂಗಳವಾರ ನಿಧನರಾದರು. ಇಂದು ಸಂಜೆ...

ಕನ್ಹಾ ಅಭಯಾರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಹುಲಿ

Newsics.Com ಮಧ್ಯಪ್ರದೇಶ: ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್‌) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
- Advertisement -
error: Content is protected !!