newsics.com
ಬೆಂಗಳೂರು: ರಾಜ್ಯದಲ್ಲಿ ಮಳೆ ಮುಂದುವರಿದಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪುಟ್ಟ ಜಿಲ್ಲೆ ಕೊಡಗಿನಲ್ಲಿ ಇನ್ನೂ ಮಳೆ ಮುಂದುವರಿದಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಊರುಬೈಲು, ಚೆಂಬು, ದಬ್ಬಡ್ಕ, ಮೇಲ್ ಚೆಂಬು ಮತ್ತು ಪೆರಾಜೆ ಗ್ರಾಮಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಧರ ಜತೆ ಜತೆಗೆ ಗುಡ್ಡ ಕುಸಿತದ ಭೀತಿ ಕಾಡುತ್ತಿದೆ.
ಬೆಟ್ಟದ ಮಣ್ಣು ದಿಢೀರನೇ ಕೊಚ್ಚಿ ಹೋಗುತ್ತಿದೆ. ಸಂಪಾಜೆ ಮತ್ತು ಕಲ್ಲು ಗುಂಡಿ ಪ್ರದೇಶದಲ್ಲಿ ಪ್ರವಾಹ ಇಳಿಮುಖವಾಗಿದೆ. ಕೊಯನಾಡು ದೇವರ ಕೊಲ್ಲಿಯಲ್ಲಿ ರಸ್ತೆಯಲ್ಲಿ ಬಿರುಕು ಮೂಡಿರುವ ಕಾರಣ ಭಾರೀ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ