Tuesday, March 2, 2021

ನಾಳೆ ಅಥವಾ ನಾಡಿದ್ದು ಹೊಸ ಮಾರ್ಗಸೂಚಿ ಬಿಡುಗಡೆ

newsics.com
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ರೂಪಾಂತರಗೊಂಡ ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆ ಹೆಚ್ಚಿರುವುದರಿಂದ ಇದನ್ನು ತಡೆಯಲು ನಾಳೆ ಅಥವಾ ಸೋಮವಾರ (ಡಿ.28) ನೂತನ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸೋಂಕು ಹಬ್ಬುವುದನ್ನು ತಡೆಗಟ್ಟುವ ಉದ್ದೇಶದಿಂದಲೇ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಕುರಿತು ಮಾರ್ಗಸೂಚಿಗಳ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ನಗರ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರು ಚರ್ಚೆ ನಡೆಸಿ ಮಾರ್ಗಸೂಚಿ ಹೊರಡಿಸುತ್ತಾರೆ ಎಂದು ತಿಳಿಸಿದರು.
ಕೊರೋನಾ ಆತಂಕ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೊರ ದೇಶಗಳಿಂದ ಬರುವವರ ಮೇಲೆ ನಿಗಾ ಇಡಲಾಗಿದೆ. ಅದರಲ್ಲೂ ವಿಮಾನ ನಿಲ್ದಾಣಗಳಲ್ಲಿ ವಿಶೇಷ ನಿಗಾವಹಿಸಲಾಗಿದೆ.
ಡಾ.ವಿಷ್ಣು ಪ್ರತಿಮೆಗೆ ಹಾನಿ; ಕಟ್ಟುನಿಟ್ಟಿನ ಕ್ರಮ
ಖ್ಯಾತ ಚಲನಚಿತ್ರ ನಟ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಗರ ಪೊಲೀಸ್ ಆಯುಕ್ತರು ಇದರ ಬಗ್ಗೆ ಮಾತನಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಹೊಸ ಕೊರೋನಾ ತಡೆಗೆ ನೂತನ ಮಾರ್ಗಸೂಚಿ

ಬೆಂಗಳೂರಲ್ಲಿ 2 ಕೋಟಿ ಮೌಲ್ಯದ ನಕಲಿ ನೋಟು ವಶ, ಇಬ್ಬರ ಬಂಧನ

ಪ್ರವಾಸಿಗರ ಕಿರುಚಾಟ: ಅಟ್ಟಿಸಿಕೊಂಡು ಬಂದ ಕಾಡಾನೆಗಳ ಹಿಂಡು

ಇನ್ನೂ 10 ವರ್ಷ ಕೊರೋನಾ ನಮ್ಮ ಜತೆ ಇರಲಿದೆ- ಬಯೋಟೆಕ್ ಸಿಇಓ

 

ಮತ್ತಷ್ಟು ಸುದ್ದಿಗಳು

Latest News

ಖಾಕಿ ಬಟ್ಟೆ ಧರಿಸಲು ಸಜ್ಜಾಗುತ್ತಿದ್ದಾರೆ 15 ಮಂಗಳಮುಖಿಯರು!

newsics.comರಾಯ್'ಪುರ(ಛತ್ತೀಸ್ಗಢ): 15 ತೃತೀಯ ಲಿಂಗಿಗಳು  ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.ದೈಹಿಕ ಪರೀಕ್ಷೆಯ ಫಲಿತಾಂಶ ಇಂದು(ಮಾ.1)...

ಗೃಹಸಾಲದ ಮೇಲಿನ ಆರಂಭಿಕ ಬಡ್ಡಿದರ ಇಳಿಸಿದ ಎಸ್’ಬಿಐ

newsics.comನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಶೇ. 6.70ಕ್ಕೆ ಇಳಿಕೆಯಾಗಿದೆ.75 ಲಕ್ಷ ರೂ.ಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 6.70ರಷ್ಟಿರಲಿದ್ದು,...

ಕೊರೋನಾ ಲಸಿಕೆ ಪಡೆದ ಇನ್ಫೋಸಿಸ್ ಮೂರ್ತಿ ದಂಪತಿ

newsics.comಬೆಂಗಳೂರು: ಮೂರನೇ ಹಂತದ ವ್ಯಾಕ್ಸಿನ್ ಸೋಮವಾರ ಆರಂಭವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರು.ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು...
- Advertisement -
error: Content is protected !!