newsics.com
ಬೆಂಗಳೂರು: ಸರ್ಜರಿ ಮಾಡುತ್ತಲೇ ಖ್ಯಾತ ನ್ಯೂರೋ ಸರ್ಜನ್, ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ವೇಣುಗೋಪಾಲ್ ಶನಿವಾರ(ಜ.22) ಕೊನೆಯುಸಿರೆಳೆದಿದ್ದಾರೆ.
ಮೊದಲ ಸರ್ಜರಿ ಮುಗಿಸಿ ಎರಡನೇ ಸರ್ಜರಿಗೆ ಸಿದ್ಧರಾಗುತ್ತಿದ್ದ ವೇಳೆಯಲ್ಲೇ ಹೃದಯಸ್ತಂಭನಕ್ಕೊಳಗಾದ 43 ವರ್ಷದ ವೇಣುಗೋಪಾಲ್ ಅಲ್ಲೇ ಕುಸಿದು ಕೊನೆಯುಸಿರೆಳೆದರು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.
ವೇಣುಗೋಪಾಲ್ ಅವರು ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರಾದರೂ, ಕೋವಿಡ್ ನಂತರದ ಅನಾರೋಗ್ಯ ಅವರ ಬದುಕನ್ನು ಕೊನೆಗೊಳಿಸಿದೆ.
ವದಂತಿ ಬೆನ್ನಲ್ಲೇ ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಸುಧಾರಣೆ ಎಂದ ವೈದ್ಯರು
ಪ್ರಬಲ, ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ ಉಪ ಪ್ರಬೇಧ ಪತ್ತೆ: ಹೆಚ್ಚಿದ ಆತಂಕ