newsics.com
ಮೈಸೂರು: ನರ ಹಂತಕ ವೀರಪ್ಪನ್ ನಿಂದ ಹತ್ಯೆಗೀಡಾದ ಅರಣ್ಯಾಧಿಕಾರಿ ಶ್ರೀನಿವಾಸ್ ಅವರ ಪುತ್ಥಳಿ ಸ್ಥಾಪನೆಗೆ ಗೋಪಿನಾಥಪುರಂ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಈಗಾಗಲೇ ಪುತ್ಥಳಿ ನಿರ್ಮಿಸಲಾಗಿದ್ದು ಅದರ ಪ್ರತಿಷ್ಟಾಪನೆಗೆ ಸಿದ್ದತೆ ನಡೆದಿದೆ. ಶ್ರೀನಿವಾಸ್ ಅವರು ಜನಪರ ಕಾಳಜಿ ಹೊಂದಿದ್ದರು. ಗೋಪಿನಾಥಪುರಂ ಗ್ರಾಮದಲ್ಲಿನ ಬಡವರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು.
ಬಡವರಿಗೆ 40 ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಶ್ರೀನಿವಾಸ್ ಅವರ ಜನಪ್ರಿಯತೆ ಸಹಿಸದ ಕಾಡುಗಳ್ಳ ವೀರಪ್ಪನ್ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಿದ್ದರು.