Tuesday, July 5, 2022

ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ

Follow Us

newsics.com

ಬಾಗಲಕೋಟೆ: ನಿವೃತ್ತ ನ್ಯಾಯಾಧೀಶರೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ.

ಬಾಗಲಕೋಟೆಯ‌ ನವನಗರದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ನವನಗರದ ಸೆಕ್ಟರ್ ನಂ 16ರ ಮನೆಯಲ್ಲಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್‌ ಆಗಿದ್ದ ಮಾನಪ್ಪ ತಳವಾರ (53) ಆತ್ಮಹತ್ಯೆ‌ ಮಾಡಿಕೊಂಡವರು. ನವನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಮಾನಪ್ಪ ತಳವಾರ ಕಡ್ಡಾಯ ನಿವೃತ್ತಿ ಮೇಲಿದ್ದರು. ಇವರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿ ಬೆಂಗಳೂರಿನಲ್ಲಿ ಜಡ್ಜ್ ಆಗಿದ್ದಾರೆ. ಎರಡನೇ ಪತ್ನಿ ಮಾನಪ್ಪ ತಳವಾರ ಜತೆ ವಾಸವಾಗಿದ್ದರು. ಬಾಗಲಕೋಟೆ ತಾಲೂಕಿನ ಹಿರಿಶೆಲ್ಲಿಕೇರಿ ಗ್ರಾಮದ ಮಾನಪ್ಪ ತಳವಾರ ಸರ್ಕಾರಿ ಸೇವೆಯಲ್ಲಿರುವಾಗಲೇ ಎರಡನೇ ವಿವಾಹವಾದ ಕಾರಣ ಕಡ್ಡಾಯ ನಿವೃತ್ತಿ ಪಡೆದಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ಫ್ಲ್ಯಾಟ್​ ವಾಪಸ್ ಕೊಡಿ ಎಂದಿದ್ದಕ್ಕೆ ಗುರೂಜಿ ಹತ್ಯೆ..?

newsics.com ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​ ಗುರೂಜಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಇದೀಗ ಕೊಲೆಗಾರರು ಯಾರು ಎಂಬುದೂ ಸಹ ಬಯಲಾಗಿದೆ. ಗುರೂಜಿಗಳ ಆಪ್ತರೇ ಆಗಿದ್ದ ಮಹಂತೇಶ್​...

ಆಗಸ್ಟ್ 6ರಂದು ಉಪ ರಾಷ್ಟ್ರಪತಿ ಚುನಾವಣೆ

newsics.com ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆ ಸಂಬಂಧ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 6 ರಂದು  ಮತದಾನ ನಡೆಯಲಿದೆ. ಪ್ರಸಕ್ತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವಧಿ ಪೂರ್ಣಗೊಳಿಸುತ್ತಿರುವ ಕಾರಣ ನೂತನ ಉಪ ರಾಷ್ಟ್ರಪತಿ...

ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ಹೆಣ್ಣಿನ ಕರಿನೆರಳು..?

newsics.com ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಕೊಲೆ ಸಾಕಷ್ಟು ಆಯಾಮಗಳನ್ನು ಪಡೆದುಕೊಳ್ತಿದೆ. ಗುರೂಜಿಗಳ ಸಾವಿನ ಹಿಂದೆ ಭಕ್ತರು ಇದ್ದಾರಾ ಅಥವಾ ಆಪ್ತರೇ ಚಂದ್ರ ಶೇಖರ್ರನ್ನು ಕೊಲೆ ಮಾಡಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಈ...
- Advertisement -
error: Content is protected !!