newsics.com
ವಿಜಯನಗರ: ಜಿಲ್ಲೆಯ ಹಲವೆಡೆ ಮಕ್ಕಳಲ್ಲಿ ಉಣ್ಣೆರೋಗ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ ಭಾಗದ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಎರಡು ಮೂರು ತಾಲೂಕುಗಳ ಮಕ್ಕಳಲ್ಲಿ ಉಣ್ಣೆ ರೋಗ ಪತ್ತೆಯಾಗಿದೆ. ವಿಜಯಪುರ, ಬಾಗಲಕೋಟೆ ಭಾಗದ ಮಕ್ಕಳಲ್ಲಿ ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಉಣ್ಣೆ ರೋಗ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಹಿಂದೆ ಹೊಸಪೇಟೆಯ ಗ್ರಾಮೀಣ ಭಾಗದಲ್ಲಿ ಈ ರೋಗ ಕಾಣಿಸಿಕೊಂಡಿತ್ತು.
ಸಾಮಾನ್ಯವಾಗಿ ಉಣ್ಣೆ ರೋಗ ಹಸು, ದನಕರುಗಳಲ್ಲಿ ಕಂಡುಬರುತ್ತದೆ. ಆದರೆ ಇದೀಗ ಚಿಕ್ಕ ಚಿಕ್ಕ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆತಂಕಕ್ಕೀಡುಮಾಡಿದೆ.
ಮಕ್ಕಳಲ್ಲಿ ಸಣ್ಣ ಪ್ರಮಾಣದ ವೈರಲ್ ಫೀವರ್ ಬರುತ್ತದೆ. ದೇಹದಲ್ಲಿ ಕೆಂಪು ಬಣ್ಣದ ಗುಳ್ಳೆಗಳು, ಮೈಮೇಲೆ ಗಡ್ಡೆಯಾಕಾರದ ಮೊಡವೆಗಳು, ಮುಖದ ಮೇಲಿರುವ ಚರ್ಮ ಕೆಂಪಾಗುವುದು ಉಣ್ಣೆರೋಗದ ಲಕ್ಷಣವಾಗಿದೆ.
ಕನ್ನಡ ಅನುಷ್ಠಾನಕ್ಕೆ ಬಲ ನೀಡುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ
ನಾಳೆ ಮಲ್ಟಿಪ್ಲೆಕ್ಸ್, ಥಿಯೇಟರ್‌ಗಳಲ್ಲಿ 75 ರೂ.ಗೆ ಸಿನಿಮಾ ವೀಕ್ಷಿಸಿ