Saturday, November 28, 2020

ನಟ ಧನ್ವೀರ್‌ ಗೌಡ ವಿರುದ್ಧ ಎಫ್‌ಐಆರ್

newsics.com
ಚಾಮರಾಜನಗರ: ಅರಣ್ಯ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ಈಗ ‘ಬಜಾರ್’ ಚಿತ್ರದ ನಾಯಕ ನಟ ಧನ್ವೀರ್‌ ಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಆದರೆ, ಎಫ್​ಐಆರ್ ಮಾಡಲಾಗಿರುವ ಪ್ರಕರಣಕ್ಕೂ ಬಂಡೀಪುರದಲ್ಲಿ ರಾತ್ರಿ ಸಫಾರಿ ಮಾಡಿದ್ದ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಟ ಧನ್ವೀರ್ ಆನೆ ಮೇಲೆ ಕುಳಿತು ದರ್ಪ ತೋರಿದ್ದಕ್ಕೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದ್ದು, ನಟ ಧನ್ವೀರ್ ಸೇರಿದಂತೆ 6 ಮಂದಿ ವಿರುದ್ಧ ಇದೀಗ ಅರಣ್ಯ ಇಲಾಖೆಯಲ್ಲಿ ಕೇಸ್ ದಾಖಲಾಗಿದೆ. ನಟ ಧನ್ವೀರ್‌ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಧನ್ವೀರ್ ಜತೆಗಿದ್ದ ಐವರು ಸ್ನೇಹಿತರಿಗೂ ಸಂಕಷ್ಟ ಎದುರಾಗಿದೆ.
ಸೆಪ್ಟೆಂಬರ್‌ 27ರಂದು ಮತ್ತಿಗೋಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ನಟ ಧನ್ವೀರ್ ಹಾಗೂ ಗೆಳೆಯರು, ಅಲ್ಲಿನ ಆನೆಗಳ ಮೇಲೆ ಕುಳಿತು ಪೋಟೋ ವಿಡಿಯೋಗೆ ಪೋಸ್ ಕೊಟ್ಟಿದ್ದರು. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ನಟ ಧನ್ವೀರ್‌ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಎಫ್‌ಐಆರ್‌ ದಾಖಲು ಮಾಡಿದೆ.
ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ಅರಣ್ಯ ಮೊಕದ್ದಮೆ ದಾಖಲಾಗಿದ್ದು, ಧನ್ವೀರ್ ಆನೆ ಮೇಲೆ ಕುಳಿತು ಸವಾರಿ ಮಾಡಿದ್ದಕ್ಕೆ ಪ್ರಮುಖ ಆರೋಪಿಯಾಗಿದ್ದಾರೆ. ಧನ್ವೀರ್ ಜತೆ 5 ಮಂದಿ ಸ್ನೇಹಿತರ ಮೇಲೂ ಎಫ್‌ಐಆರ್‌. A1 ಧನ್ವೀರ್‌, A2 ವಿಶ್ವಾಸ್‌ ಅಯ್ಯಾರ್‌, A3 ದರ್ಶನ್‌ ಬಿನ್‌ ನಂದಕುಮಾರ್ ಹಾಗೂ ಈ ಜತೆಗೆ ಹೆಸರು ಪತ್ತೆಯಾಗದ ಇನ್ನು ಮೂವರು ಆರೋಪಿಗಳ ವಿರುದ್ಧ ಕೇಸ್‌ ದಾಖಲಾಗಿದೆ.

ಆಕರ್ಷಕ ರಂಗ ಇನ್ನಿಲ್ಲ; ಒಂದೇ ವಾರದಲ್ಲಿ ಸಕ್ರೆಬೈಲು ಬಿಡಾರದ 3 ಆನೆ ಸಾವು

ಬರಾಕ್ ಒಬಾಮಾ ನಿಜವಾಗ್ಲೂ ಖಾಸಗಿ ಕಂಪನಿ ನೌಕರರಾ…?

ರಾತ್ರಿ ಬಸ್’ನಲ್ಲೇ ಮಲಗಿ; 100 ರೂ. ಪಾವತಿಸಿ..!

ರಬ್ಬರ್ ಗೆ ಮೂರು ವರ್ಷದ ಬಳಿಕ ದಾಖಲೆ ದರ

ಈರುಳ್ಳಿ ದಾಸ್ತಾನು: ವ್ಯಾಪಾರಿಗಳಿಗೆ ಮಿತಿ ನಿಗದಿಪಡಿಸಿದ ಕೇಂದ್ರ

ಮತ್ತಷ್ಟು ಸುದ್ದಿಗಳು

Latest News

ಸಿಎಂ ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ದಾಖಲು

newsics.com ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಶುಕ್ರವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂತೋಷ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಬೆಂಗಳೂರಿನ ಎಮ್.ಎಸ್....

ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಹತ್ಯೆ

newsics.com ಟೆಹ್ರಾನ್: ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಹ್ ಅವರನ್ನು ಶುಕ್ರವಾರ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.ಟೆಹ್ರಾನ್‌ನ ಸಮೀಪ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್‌ನ...

ಮುಂಬೈನಲ್ಲಿ ದಾರಿ ತಪ್ಪಿದ್ದ ಸಚಿನ್ ತೆಂಡೂಲ್ಕರ್!

newsics.com ಬೆಂಗಳೂರು: ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಮುಂಬೈನಲ್ಲಿ ದಾರಿ ತಪ್ಪಿದ್ದರಂತೆ. ಆಗ ಆಟೋವಾಲಾ ಒಬ್ಬರು ನೆರವಿಗೆ ಬಂದಿದ್ದರಿಂದ ಮನೆ ತಲುಪಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.ಈ ವರ್ಷದ ಜನವರಿಯಲ್ಲಿ...
- Advertisement -
error: Content is protected !!