ಕಾರವಾರ: ಮುರ್ಡೇಶ್ವರದ ಬಳಿ ಸಮುದ್ರದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.
ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿರುವ ಅವರು, ಸದ್ಯ ರಿಲ್ಯಾಕ್ ಮೂಡ್ನಲ್ಲಿದ್ದಾರೆ.
ಉತ್ತರ ಕನ್ನಡದ ನೇತ್ರಾಣಿ ದ್ವೀಪದಲ್ಲಿ ಸಮುದ್ರದಾಳದಲ್ಲಿ ಸುಮಾರು 35 ನಿಮಿಷಗಳ ಕಾಲ ಸ್ಕೂಬಾ ಡೈವಿಂಗ್ ನಡೆಸಿದ್ದಾರೆ. ಬಗೆ ಬಗೆ ಮೀನುಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ರೋಹಿಣಿ ಸಿಂಧೂರಿ ಈಗ ರೇಷ್ಮೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೇತ್ರಾಣಿ ದ್ವೀಪದಲ್ಲಿ ರೋಹಿಣಿ ಸಿಂಧೂರಿ ಸ್ಕೂಬಾ ಡೈವಿಂಗ್
Follow Us