newsics.com
ಹಾಸನ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್ ಪಿಎಸ್’ಐಗೆ ಇರಿದ ಘಟನೆ ಹಾಸನದಲ್ಲಿ ನಡೆದಿದೆ.
ಇದರಿಂದಾಗಿ ಆತ್ಮ ರಕ್ಷಣೆಗಾಗಿ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ, ಬಂಧಿಸಿರುವಂತ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂವರು ಯುವಕರ ಮೇಲೆ ಚೂರಿ ಇರಿತದ ಪ್ರಕರಣದಲ್ಲಿ ರೌಡಿ ಶೀಟರ್ ಸುನಿಲ್ ಬಂಧಿಸಲು, ಪಿಎಸ್ಐ ತೆರಳಿದ್ದರು. ಈ ವೇಳೆ ಪಿಎಸ್ಐಗೆ ಚೂರಿಯಿಂದ ಇರಿದು, ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹಾಸನ ಗ್ರಾಮಾಂತರ ಠಾಣೆಯ ಸಿಪಿಐ ಸುರೇಶ್ ಆರೋಪಿಯ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ರೌಡಿ ಶೀಟರ್ ಸುನಿಲ್ ಹಾಗೂ ಪಿಎಸ್ ಐ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ; ನಾಲ್ವರು ಸಾವು
ಸೇನಾಧಿಕಾರಿಗಳ ಹೆಸರಿನಲ್ಲಿ ವಂಚನೆ: ನಾಲ್ವರು ಕಳ್ಳರ ಬಂಧನ