newsics.com
ಕೋಲಾರ: ಆರ್ಎಸ್ಎಸ್ ಹಾಗೂ ಎಬಿವಿಪಿ ನಾಯಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ವೆಂಕಟೇಶ್ವರ ದೇವಾಲಯದ ಬಳಿ ನಡೆದಿದೆ.
ಶನಿವಾರ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ನಡೆದಿದೆ. ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗ ಇಬ್ಬರು ಗಲಾಟೆ ಮಾಡುತ್ತಿದ್ದರು. ಈ ವೇಳೆ ಗಲಾಟೆಯನ್ನು ಬಿಡಿಸಿ ಅಂಗಡಿಗೆ ವಾಪಸ್ಸಾಗುವಾಗ ಇಬ್ಬರು ಅನ್ಯ ಕೋಮಿನ ಯುವಕರು ಎಬಿವಿಪಿ ಅಧ್ಯಕ್ಷ ರವಿ ಎನ್ನುವರಿಗೆ ಅನ್ಯ ಕೋಮಿನ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ. ಸದ್ಯ ಗಾಯಗೊಂಡಿರುವ ರವಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸಂಭಸುತ್ತಿದ್ದಂತೆ ಆರ್ಎಸ್ಎಸ್ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಕುಸ್ತಿಯಲ್ಲಿ ಚಿನ್ನ ಗೆದ್ದ ರವಿ ದಹಿಯಾ, ಭಾರತಕ್ಕೆ ಸಿಕ್ತು 10 ಗೋಲ್ಡ್ ಮೆಡಲ್