newsics.com
ಬೆಂಗಳೂರು: ತಾಯ್ತನ ಅನ್ನೋದು ಹೆಣ್ಣಿನ ಬದುಕಿನ ಮಹತ್ವದ ಘಳಿಗೆ. ಆದರೆ ನಟಿ ಮೇಘನಾರಾಜ್ ಮಾತ್ರ ಈ ಹೊತ್ತಿನಲ್ಲಿ ಯಾರಿಗೂ ಬರಬಾರದಂತ ದುಃಖ ಅನುಭವಿಸುತ್ತಿದ್ದಾರೆ. ಆದರೆ ಅವರ ಈ ನೋವನ್ನು ಕಡಿಮೆ ಮಾಡೋಕೆ ಸ್ಯಾಂಡಲ್’ವುಡ್ ನಟಿಯರು ಪ್ರಯತ್ನಿಸಿದ್ದು, ಮೇಘನಾರಾಜ್ ಅವರನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ.
ನಟಿ ಮೇಘನಾರಾಜ್ ಈಗ ತುಂಬು ಗರ್ಭಿಣಿ. ಆದರೆ ಈ ಸಂಭ್ರಮದ ಜತೆ ಪತಿ ಚಿರಂಜೀವಿ ಸರ್ಜಾ ಕಳೆದುಕೊಂಡ ನೋವು ಅವರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಮೇಘನಾ ರಾಜ್ ಈ ನೋವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಯಾಂಡಲ್ವುಡ್ ಹಿರಿಯ ನಟಿಯರಾದ ಸುಧಾರಾಣಿ, ಶೃತಿ, ಮಾಳವಿಕಾ ಅವರ ಮನೆಗೆ ಭೇಟಿ ನೀಡಿದ್ದಾರೆ.
ಅಷ್ಟೇ ಅಲ್ಲ, ತಾಯ್ತನದ ವೇಳೆ ಹೇಗೆ ಖುಷಿಯಾಗಿ ಇರಬೇಕು. ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಮೇಘನಾಗೆ ತಿಳಿವಳಿಕೆ ಹೇಳಿ ಆಕೆಯ ಜತೆಗೆ ನಾವೆಲ್ಲ ಇದ್ದೇವೆ ಎಂಬ ಭಾವನೆ ಮೂಡಿಸಿ ಸಂತೈಸಿದ್ದಾರೆ.
ಎಲ್ಲ ಸೇರಿ ಪ್ರಮೀಳಾ ಜೋಷಾಯ್ ಕೈಯಲ್ಲಿ ಮಸಾಲೆ ದೋಸೆ ಸವಿದು ಮರಳಿದ್ದಾರೆ. ಜತೆಗೆ ಒಂದಷ್ಟು ಪೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
ಗರ್ಭಿಣಿ ಮೇಘನಾರಾಜ್’ಗೆ ಧೈರ್ಯ ತುಂಬಿದ ನಟಿಯರು
Follow Us