ಬೆಂಗಳೂರು: ಸ್ಯಾಂಡಲ್ವುಡ್ ಬಾದ್’ಷಾ ಕಿಚ್ಚ ಸುದೀಪ್ ನಾಲ್ಕು ಸರ್ಕಾರಿ ಶಾಲೆಗಳನ್ನ ದತ್ತು ಪಡೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಒಬನಹಳ್ಳಿ, ಬಗ್ಗನಡು ಹಳ್ಳಿ, ಪರಶುರಾಂಪುರ, ಮತ್ತು ಚಿತ್ರನಾಯಕನಹಳ್ಳಿಯ ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಶಾಲೆಯ ಸಂಪೂರ್ಣ ಅಭಿವೃದ್ಧಿಯನ್ನು ವಹಿಸಿಕೊಂಡಿದ್ದಾರೆ.
ಈ ತಾಲೂಕುಗಳ ಬಿಇಓಗಳ ಸಮ್ಮುಖದಲ್ಲಿ ಕಿಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲೆಗಳನ್ನ ದತ್ತು ಪಡೆಯಲಾಗಿದೆ. ಸರ್ಕಾರಿ ಶಾಲೆಗಳನ್ನ ಡಿಜಿಟಲೀಕರಣ ಮಾಡುವುದು ಕಿಚ್ಚ ಸುದೀಪ್ರ ಮುಖ್ಯ ಗುರಿಯಾಗಿದ್ದು, ಈ ಶಾಲೆಗಳಿಗೆ ಅಗತ್ಯವಿರುವ ಕಂಪ್ಯೂಟರ್ಗಳನ್ನು ನೀಡಲು ಮಾತುಕತೆ ನಡೆಸಲಾಗಿದೆ. ಶಾಲೆಗಳು ತೆರೆಯುತ್ತಿದ್ದಂತೆ ಶಾಲಾ ಪರ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಕೆಲಸಗಳು ಆರಂಭವಾಗಲಿವೆ.
ಶಾಲೆಯ ಮೂಲ ಸೌಕರ್ಯ, ಪೀಠೋಪಕರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ,ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಕರೆತರುವ ಪ್ರಯತ್ನ ಈ ಮೂಲಕ ಮಾಡಲಾಗುತ್ತಿದೆ.
ಗಣಿತಜ್ಞೆ ಶಕುಂತಲಾ ದೇವಿ ಜೀವನಾಧಾರಿತ ಸಿನಿಮಾ ಜು.31ಕ್ಕೆ ತೆರೆಗೆ
ಈಗಾಗಲೇ ಕಿಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಡ್ರೈವರ್ ಕುಟುಂಬಕ್ಕೆ ನೆರವು ನೀಡಿದ್ದರು. ಬಡ ಬಾಲಕಿಯ ಓದಿನ ಸಂಪೂರ್ಣ ಖರ್ಚನ್ನು ಕೂಡ ಕಿಚ್ಚ ಚಾರಿಟಬಲ್ ಟ್ರಸ್ಟ್ ಭರಿಸಿತ್ತು. ಕೆಲ ದಿನಗಳ ಹಿಂದೆ ಸರ್ಕಾರ ಶಾಲೆಯ 500 ಮಕ್ಕಳಿಗೆ ಶೂ ಮತ್ತು ಯೂನಿಫಾರಂ ವಿತರಣೆ ಕಿಚ್ಚನ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ಆಗಿತ್ತು.