newsics.com
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಹೊರ ರಾಜ್ಯಗಳಲ್ಲೂ ತೀವ್ರ ಶೋಧ ಮುಂದುವರಿಸಿದ್ದಾರೆ.
ಮುಂಬೈ, ದೆಹಲಿ ಸೇರಿ ಐದಕ್ಕೂ ಹೆಚ್ಚು ರಾಜ್ಯಗಳಲ್ಲಿ ಶೋಧಕಾರ್ಯ ಮುಂದುವರೆದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಕಳೆದೊಂದು ವಾರದಿಂದ ಪ್ರಕರಣದ ಎ6 ಆರೋಪಿ ಆದಿತ್ಯಾ ಆಳ್ವಾ ಇನ್ನೂ ಪತ್ತೆಯಾಗಿಲ್ಲ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಆದಿತ್ಯಾ ಆಳ್ವಾಗಾಗಿ ಪೊಲೀಸರು ಹುಟುಕಾಟ ಮುಂದುವರಿಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿರುವುದು ಸಿಸಿಬಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಡ್ರಗ್ಸ್ ಕೇಸ್ನ ಪ್ರಮುಖ ಆರೋಪಿ ಆದಿತ್ಯಾ ಆಳ್ವಾ ದಿನಕ್ಕೊಂದು ಸ್ಥಳ ಬದಲಿಸುತ್ತಿದ್ದಾನೆ ಎನ್ನಲಾಗಿದೆ. ಆರೋಪಿ ನಟಿ ರಾಗಿಣಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆದಿತ್ಯಾ ಆಳ್ವಾ ಹಲವು ಪಾರ್ಟಿಗಳಲ್ಲಿ ಭಾಗಿಯಾಗಿದ್ದ. ಆಳ್ವಾ ವಿರುದ್ಧ ಬೆಂಗಳೂರಿನ ಕಾಟನ್’ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಈ ಮಧ್ಯೆ, ನಿರೀಕ್ಷಣಾ ಜಾಮೀನಿಗಾಗಿ ಆದಿತ್ಯಾ ಆಳ್ವಾ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದು, ಸೋಮವಾರ (ಸೆ.14) ಈ ಪ್ರಕರಣದ ತನಿಖೆ ನಡೆಯಲಿದೆ.
ಕಾನೂನು ಪದವಿ ವ್ಯಾಸಂಗ; ಕೋರ್ಟ್ ಮೆಟ್ಟಿಲೇರಿದ 77ರ ಅಜ್ಜಿ!