ಸಂಜನಾ , ರಾಗಿಣಿ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ

Newsics.com ಬೆಂಗಳೂರು: ಮಾದಕ ದ್ರವ್ಯ  ಜಾಲದ  ನಂಟಿನ  ಆರೋಪದ ಹಿನ್ನೆಲೆಯಲ್ಲಿ  ಬಂಧನದಲ್ಲಿರುವ ನಟಿಯರಾದ ಸಂಜನಾ ಮತ್ತು ರಾಗಿಣಿ ಅವರ ಜಾಮೀನು ಅರ್ಜಿ ಯನ್ನು ಹೈಕೋರ್ಟ್  ಇಂದು  ತಳ್ಳಿಹಾಕಿದೆ.  ಹೈಕೋರ್ಟ್ ನ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. ಅಕ್ಟೋಬರ್ 24 ರಂದು ವಿಚಾರಣೆ ಪೂರ್ತಿಗೊಳಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಶ್ರೀನಿವಾಸ್ ದಿನೇಶ್ ಕುಮಾರ್  ಇಬ್ಬರು ನಟಿಯರ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ್ದಾರೆ. ಇದೀಗ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ನಟಿಯರು ಮೇಲ್ಮನವಿ ಸಲ್ಲಿಸಬೇಕಾಗಿದೆ