ಬೆಂಗಳೂರು: ಮಾದಕ ದ್ರವ್ಯ ಜಾಲದ ಜತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಸಂಜನಾ ಮತ್ತು ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಆರೋಪಿಗಳ ಪರ ವಕೀಲರು ಇಂದು ಜಾಮೀನು ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಂಜನಾ ಮತ್ತು ರಾಗಣಿ ಜಾಮೀನಿನ ಮೇಲೆ ಬಿಡುಗಡೆಗೆ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ತನಿಖೆ ಇನ್ನೂ ಪೂರ್ತಿಯಾಗಿಲ್ಲ. ಆರೋಪಿಗಳು ಪ್ರಭಾವಶಾಲಿಗಳಾಗಿದ್ದು, ತಮ್ಮದೇ ಆದ ನೆಟ್ ವರ್ಕ್ ಹೊಂದಿದ್ದಾರೆ. ಇದರಿಂದ ಸಾಕ್ಷ್ಯ ನಾಶವಾಗುವ ಸಾಧ್ಯತೆಯಿದೆ ಎಂಬ ವಾದವನ್ನು ಸಿಸಿಬಿ ಪರ ವಕೀಲರು ಮಂಡಿಸುವ ಸಾಧ್ಯತೆಯಿದೆ.
ಭಾನುವಾರ ಸಂಜನಾ ಮತ್ತು ರಾಗಿಣಿ ಪರಪ್ಪನ ಅಗ್ರಹಾರದ ಜೈಲ್ಲಿನಲ್ಲಿರುವ ದೂರವಾಣಿ ಬಳಸಿ ತಮ್ಮ ವಕೀಲರ ಜತೆ ಚರ್ಚೆ ನಡೆಸಿದ್ದರು.