newsics.com
ಬೆಂಗಳೂರು: ಮಾದಕ ದ್ರವ್ಯ ಜಾಲದ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಅವರು ಹಿಂದೂ ಧರ್ಮ ತ್ಯಜಿಸಿ ಇನ್ನೊಂದು ಧರ್ಮಕ್ಕೆ ಮತಾಂತರವಾಗಿದ್ದಾರೆಯೇ .. ಈ ಪ್ರಶ್ನೆ ಇಂದು ಉದ್ಬವಿಸಿದೆ. ಸಂಜನಾ ಅವರು ಇನ್ನೊಂದು ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ದಾಖಲೆಯೊಂದು ಹರಿದಾಡುತ್ತಿದೆ. ಆದರೆ ಈ ಸಂಬಂಧ ಇದುವರೆಗೆ ಸಂಜನಾ ಅವರಾಗಲೀ ಅಥವಾ ಅವರ ಕುಟುಂಬದವರಾಗಲೀ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಭಾರತದ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ಅವರು ಇಚ್ಚಿಸುವ ಧರ್ಮವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡುತ್ತಿದೆ. ಇದು ಕಾನೂನು ಬದ್ದವಾಗಿ ತಪ್ಪಲ್ಲ. ಇಲ್ಲಿ ಯಾರೂ ಕೂಡ ಬಲವಂತ ಮಾಡಬಾರದು ಎಂಬುದನ್ನು ಮಾತ್ರ ಸಂವಿಧಾನ ಸ್ಪಷ್ಟಪಡಿಸಿದೆ.
ಪ್ರಶಾಂತ್ ಸಂಬರಗಿ ಕೂಡ ಇಂದು ತಮ್ಮ ಫೇಸ್ ಬುಕ್ ಅಕೌಂಟ್’ನಲ್ಲಿ ಸಂಜನಾ ಅವರ ಧರ್ಮ ಬದಲಾವಣೆ ಬಗ್ಗೆ ಪ್ರಸ್ತಾಪ ಮಾಡಿದ್ದರು.