newsics.com
ಸಿದ್ದಾಪುರ(ಉತ್ತರ ಕನ್ನಡ): ಹಿರಿಯ ವಿದ್ವಾಂಸ ವೇದಬ್ರಹ್ಮಶ್ರೀ ಅಗ್ಗೆರೆ ರಾಮಕೃಷ್ಣ ಭಟ್ಟರು (89) ಗುರುವಾರ ಮಧ್ಯರಾತ್ರಿ ವಿಧಿವಶರಾದರು.
ಗುರುವಾರ(ಅ.14) ಸಂಜೆ ವಯಸ್ಸಹಜ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 12:20ರ ವೇಳೆಗೆ ಕೊನೆಯುಸಿರೆಳೆದರೆಂದು ಅವರ ಪುತ್ರ, ಮೈಸೂರು ಕೇಂದ್ರೀಯ ವಿದ್ಯಾಲಯದ ನಿವೃತ್ತ ಸಂಸ್ಕೃತ ಶಿಕ್ಷಕ ವಿದ್ವಾನ್ ಹೇರಂಭ ಭಟ್ ತಿಳಿಸಿದ್ದಾರೆ.
ಶುಕ್ರವಾರ(ಅ.15) ಮೃತರ ಅಂತ್ಯಕ್ರಿಯೆ ಅಗ್ಗೆರೆಯಲ್ಲಿ ನಡೆಯಲಿದೆ ಎಂದು ಹೇರಂಭ ಭಟ್ ಮಾಹಿತಿ ನೀಡಿದ್ದಾರೆ. ರಾಮಕೃಷ್ಣ ಭಟ್ಟರಿಗೆ ಪತ್ನಿ ಭುವನೇಶ್ವರಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.
ಆಳವಾದ ಅಧ್ಯಯನದ ಮೂಲಕ ಪ್ರಕಾಂಡ ಪಂಡಿತರೆನಿಸಿದ್ದ ಅವರು ಈ ಭಾಗದ ಹಿರಿಯ ಪುರೋಹಿತರಾಗಿದ್ದರು. ಸಮಯ ಪಾಲನೆಗೆ ಹೆಸರಾಗಿದ್ದ ರಾಮಕೃಷ್ಣ ಭಟ್ಟರು ಧಾರ್ಮಿಕ ವಿಧಿ-ವಿಧಾನಗಳನ್ನು ಚಾಚೂತಪ್ಪದೆ ಅಚ್ಚುಕಟ್ಟಾಗಿ, ಶ್ರದ್ಧಾಪೂರ್ವಕವಾಗಿ ಮಾಡಿಸುವಲ್ಲಿ ನಿಷ್ಣಾತರಾಗಿದ್ದರು.
ಸೌರಶಕ್ತಿಯಿಂದ ಇಸ್ತ್ರಿ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ 14ರ ಬಾಲಕಿ: ‘ಇಕೋ ಆಸ್ಕರ್’ಗೆ ಆಯ್ಕೆ