Thursday, December 8, 2022

ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ​ ಆರ್.ವೆಂಕಟರಮಣಿ ನೇಮಕ

Follow Us

newsics.com

ನವದೆಹಲಿ: ಭಾರತದ ಮುಂದಿನ ಅಟಾರ್ನಿ ಜನರಲ್​ ಆಗಿ ಹಿರಿಯ ವಕೀಲ ಆರ್.ವೆಂಕಟರಮಣಿಯವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೆ.ಕೆ.ವೇಣುಗೋಪಾಲ್‌ರಿಂದ ತೆರವಾಗಿದ್ದ ಸ್ಥಾನಕ್ಕೆ ಆರ್.ವೆಂಕಟರಮಣಿಯವರನ್ನು ಮೂರು ವರ್ಷಗಳ ಅವಧಿಗೆ ಭಾರತದ ಹೊಸ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿ ಭಾರತ ಸರ್ಕಾರವು ಸೂಚಿಸಿದೆ.

ಭಾರತದ ಪ್ರಸ್ತುತ ಅಟಾರ್ನಿ ಜನರಲ್, 91 ವರ್ಷದ ಕೆ ಕೆ ವೇಣುಗೋಪಾಲ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿದೆ. ಮುಕುಲ್ ರೋಹಟಗಿ ಅವರು ಜೂನ್ 2014 ರಿಂದ ಜೂನ್ 2017 ರವರೆಗೆ ಅಟಾರ್ನಿ ಜನರಲ್ ಆಗಿದ್ದರು. ಅವರ ನಂತರ ವೇಣುಗೋಪಾಲ್ ಅವರು ಜುಲೈ 2017 ರಲ್ಲಿ ಹುದ್ದೆಗೆ ನೇಮಕಗೊಂಡರು.

ಡಿ.ಕೆ. ಶಿವಕುಮಾರ್ ಮನೆಗಳಿಗೆ ಸಿಬಿಐ ಅಧಿಕಾರಿಗಳ ತಂಡ ಭೇಟಿ

ಮತ್ತಷ್ಟು ಸುದ್ದಿಗಳು

vertical

Latest News

ಹೆಸರು ಬದಲಾವಣೆಗೆ ಒಪ್ಪಿದ ಚುನಾವಣಾ ಆಯೋಗ: ಟಿಆರ್‌ಎಸ್ ಇನ್ನು ಬಿಆರ್‌ಎಸ್

newsics.com ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಹೆಸರು ಬದಲಾಗಿದೆ. ಟಿಆರ್‌ಎಸ್‌ ಪಕ್ಷಕ್ಜೆ ಭಾರತ ರಾಷ್ಟ್ರ ಸಮಿತಿ (Bharat Rashtra Samithi)...

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಬುಧವಾರ ಸಂಜೆ ಸೈನಿಕರು...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...
- Advertisement -
error: Content is protected !!