newsics.com
ಮೈಸೂರು: ಹಿರಿಯ ಪತ್ರಿಕಾ ಛಾಯಾಗ್ರಾಹಕ ಅಮರ್ ದಾಸ್ ಡಿ. ಹೆಚ್. (83) ಅವರು ಭಾನುವಾರ ಬೆಳಗಿನ ಜಾವ ನಿಧನರಾದರು.
ವಯೋಸಹಜ ಅಸ್ವಸ್ಥತೆಯಿಂದ ಅಮರ್ ದಾಸ್ ಅವರು ಭಾನುವಾರ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಮೈಸೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಅಮರ್ ದಾಸ್ ಬಾಂಬೆಯ ಸೆಂಟ್ ಕ್ಷೇವಿಯರ್ ಕಾಲೇಜಿನಲ್ಲಿ ಫೋಟೋಗ್ರಫಿ ಡಿಪ್ಲೊಮಾ ಮುಗಿಸಿ 1956ರಲ್ಲಿ ಮೈಸೂರಿಗೆ ಹಿಂದಿರುಗಿದರು. ಹವ್ಯಾಸಿ ಛಾಯಾಗ್ರಾಹಕರಾಗಿ ಮೈಸೂರಿನ ಹಲವು ಘಟನಾವಳಿಗಳ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದರು. ಸುಧರ್ಮ, ಡೆಕ್ಕನ್ ಹೆರಾಲ್ಡ್ ಮತ್ತಿತರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅಮರ್ ದಾಸ್ ಅವರಿಗೆ ಪತ್ನಿ ಆಶಾ ದಾಸ್, ಮಕ್ಕಳಾದ ಪ್ರೀತಿ, ಜ್ಯೋತಿ, ನಿತಿನ್ ಇದ್ದಾರೆ.
ಹಿರಿಯ ಪತ್ರಿಕಾ ಛಾಯಾಗ್ರಾಹಕ ಅಮರ್ ದಾಸ್ ನಿಧನ
Follow Us