newsics.com
ಬೆಂಗಳೂರು: ಹಿರಿಯ ಚಿತ್ರ ನಿರ್ಮಾಪಕ ಹಾಗೂ ವಿತರಕ ಕೆ ಸಿ ಎನ್ .ಚಂದ್ರು ನಿಧನಹೊಂದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಅವರು ಕೊನೆಯುಸಿರು ಎಳೆದಿದ್ದಾರೆ.
ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕೆ ಸಿ ಎನ್ ಚಂದ್ರು ಮಹತ್ವದ ಕೊಡುಗೆ ನೀಡಿದ್ದಾರೆ.
ಹುಲಿ ಹಾಲಿನ ಮೇವು, ಬಬ್ರುವಾಹನ ಮೊದಲಾದ ಉತ್ತಮ ಚಿತ್ರಗಳ ನಿರ್ಮಾಪಕರಾಗಿದ್ದರು. ಚಿತ್ರ ವಿತರಣೆಯಲ್ಲಿ ಕೂಡ ಗುರುತಿಸಿಕೊಂಡಿದ್ದರು.
ಕೆ ಸಿ ಎನ್ ಚಂದ್ರು ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.