Saturday, November 26, 2022

ಸಂಚಾರಿ ವಿಜಯ್ ಅಂಗಾಂಗ ದಾನದಿಂದ ಏಳು ಮಂದಿಗೆ ಹೊಸ ಜೀವನ

Follow Us

newsics.com

ಬೆಂಗಳೂರು: ಸಾವಿನಲ್ಲಿ ಕೂಡ ಸಾರ್ಥಕತೆ ಮೆರೆದಿರುವ ನಟ ಸಂಚಾರಿ ವಿಜಯ್  ಅಂಗಾಂಗ ದಾನ ಮಾಡುವುದರ ಮೂಲಕ ಏಳು ಮಂದಿಗೆ ಹೊಸ ಬದುಕು ನೀಡಿದ್ದಾರೆ.

ಎರಡು ಕಿಡ್ನಿ, ಲಿವರ್ ಮತ್ತು ಹೃದಯದ ವಾಲ್ವ್ ನ್ನು ದಾನ ಮಾಡಲಾಗಿದೆ.

ಇಂದು ಮುಂಜಾನೆ  ಸಂಚಾರಿ ವಿಜಯ್ ಮೃತಪಟ್ಟಿರುವುದನ್ನು ಅಧಿಕೃತವಾಗಿ ಪ್ರಕಟಿಸಿರುವ ಅಪೋಲೋ ಆಸ್ಪತ್ರೆ,  ಸಂಚಾರಿ ವಿಜಯ್ ಅವರ ಕುಟುಂಬಸ್ಥರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಿದೆ.

ಬೆಳಿಗ್ಗೆ 10 ಗಂಟೆ ತನಕ  ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಸಂಬಂಧ ಎಲ್ಲ ಸಿದ್ದತೆ ಪೂರ್ಣಗೊಳಿಸಿದೆ.

ಬಳಿಕ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. ಅಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್...

ನಟಿ ರಿಚಾ ಚಡ್ಡಾಗೆ ಬೆಂಬಲ ಸೂಚಿಸಿದ ಸ್ವರ ಭಾಸ್ಕರ್

newsics.com ಮುಂಬೈ: ದೇಶದ ಸೇನೆಯನ್ನು ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ನಟಿ ರಿಚಾ ಚಡ್ಡಾಗೆ  ನಟಿ ಸ್ವರ ಭಾಸ್ಕರ್ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಿಚಾ...

ಮಹಾರಾಷ್ಟ್ರದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮೇಲೆ ಕಲ್ಲು ತೂರಾಟ

newsics.com ಬೆಳಗಾವಿ: ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪುಂಡಾಟಿಕೆ ಮುಂದುವರಿದಿದೆ. ರಾಜ್ಯದ ಸಾರಿಗೆ ಬಸ್ ನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆಯಿಂದ ರಾಜ್ಯದ ಅಥಣಿಗೆ ಬರುತ್ತಿದ್ದ ಬಸ್ ನ ಮೇಲೆ ಕಲ್ಲು ತೂರಾಟ...
- Advertisement -
error: Content is protected !!