5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

newsics.comಚಾಮರಾಜನಗರ: ಚಾಕೊಲೇಟ್ ಆಸೆ ತೋರಿಸಿ ಕಾಮುಕನೊಬ್ಬ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಜಿಲ್ಲೆಯ ಕೊಳ್ಳೇಗಾಲದಲ್ಲಿ ಈ ಕೃತ್ಯ ನಡೆದಿದ್ದು, 55 ವರ್ಷದ ವೇಣುಗೋಪಾಲ್ ಈ ನೀಚ ಕೃತ್ಯ ಎಸಗಿದ್ದಾನೆ.ಕೊಳ್ಳೇಗಾಲದ ಮಂಜುನಾಥ ನಗರ ಬಡಾವಣೆ ನಿವಾಸಿಯಾಗಿರುವ ಆರೋಪಿ ಎದುರು ಮನೆ ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿಯ ಗುಪ್ತಾಂಗದಲ್ಲಿ ಗಾಯಗಳಾಗಿದ್ದು, ಪೋಷಕರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.