newsics.com
ಬೆಂಗಳೂರು: ಈದ್ ಮಿಲಾದ್ ಮೆರವಣಿಗೆ ಗುಂಪಿನ ಮೇಲೆ ಕಲ್ಲು ತೂರಾಟ ಮಾಡಿರುವ ದುರ್ಘಟನೆ ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿ ನಡೆದಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.
ರಾಗಿಗುಡ್ಡದಿಂದ ಮೆರವಣಿಗೆ ಹೊರಟಾಗ ಹಿಂದೂ ದೇಗುಲದ ಬಳಿ ಮೆರವಣಿಗೆ ಹಿಂಬದಿಯ ಯುವಕನ ಜೊತೆ ಮಾತಿನ ಚಕ್ರಮಕಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಉಂಟಾದ ಮಾತಿನ ಚಕಮಕಿಯಿಂದಾಗಿ ಮುಂದೆ ಸಾಗಿದ್ದ ಮೆರವಣಿಗೆ ಮರಳಿ ಬಂದಿದೆ.
ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಾಗುವ ವೇಳೆ ಘರ್ಷಣೆ ಕಲ್ಲು ತೂರಾಟದ ಘಟನೆ ನಡೆದಿದ್ದು, ಮೆರವಣಿಗೆ ಸಾಗುತ್ತಿದ್ದ ಜನರು ದಿಕ್ಕಾ ಪಾಲಾಗಿ ಓಡಿದ್ದಾರೆ. ಇನ್ನು ಕೆಲವರು ತಾವು ದೂರ ನಿಂತುಕೊಂಡು ತಾವು ಕೂಡ ಕಲ್ಲೆಸೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಿವರ್ಷ ಹಬ್ಬಗಳ ಆಚರಣೆ ವೇಳೆ ಕೋಮುಯ ಸಂಘರ್ಷಗಳು ಕಂಡುಬರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭಾನುವಾರ ಸಂಜೆ ನಡೆಯುತ್ತಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆಯೂ ಕಲ್ಲು ತೂರಾಟದ ಘಟನೆ ನಡೆದಿದೆ.