Saturday, April 17, 2021

ಕೊರೋನಾ ಭಯ; ಹಣ ಕೊಟ್ಟರೂ ನೀರು ಕೊಡದ ಅಂಗಡಿ ಮಾಲೀಕ, ಹೃದ್ರೋಗಿ ಸಾವು!

ಮಂಗಳೂರು: ಹಣ ಕೊಡುತ್ತೇನೆಂದರೂ ಅಂಗಡಿಯೊಂದರ ಮಾಲೀಕ ನೀರು ಕೊಡದ್ದರಿಂದ ಹೃದಯರೋಗಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 6 ರಂದು ಈ ಘಟನೆ ನಡೆದಿದೆ. ಜೂನ್ 6 ರ ರಾತ್ರಿ ಸುಳ್ಯದ ರಾಜೇಶ್ ಎಂಬುವರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಂಬುಲೆನ್ಸ್ ನಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗಮಧ್ಯೆ ರಾಜೇಶ್ ನೀರು ಬೇಕೆಂದು ಕೇಳಿದ್ದಾರೆ. ಆಂಬುಲೆನ್ಸ್ ನಲ್ಲಿ ನೀರು ಖಾಲಿಯಾದ್ದರಿಂದ ನೀರು ತರಲು ಆಂಬುಲೆನ್ಸ್ ಚಾಲಕ ಮಂಗಳೂರಿನ ಮೆಲ್ವಿನ್ ಪಿಂಟೋ ಎಂಬುವರ ಅಂಗಡಿ ಬಳಿ ತೆರಳಿದ್ದಾರೆ. ಆಗ ಆ ಅಂಗಡಿ ಮಾತ್ರ ತೆರೆದಿತ್ತು. ಅವರ ಬಳಿ ಆಂಬುಲೆನ್ಸ್ ಚಾಲಕ ಅಭಿಷೇಕ್ ನೀರು ಹಾಗೂ ಆಂಬುಲೆನ್ಸ್ ನಲ್ಲಿದ್ದ ರೋಗಿ ಕಡೆಯ ಇಬ್ಬರು ಪುಟ್ಟ ಮಕ್ಕಳಿಗೆ ಬಿಸ್ಕೆಟ್ ಬೇಕೆಂದು ಕೇಳಿದ್ದಾರೆ. ಆದರೆ ಅಂಗಡಿ ಮಾಲೀಕ, ನೀವು ಆಂಬುಲೆನ್ಸ್ ನಲ್ಲಿ ಬಂದಿದ್ದೀರಿ. ನಿಮಗೆ ಕೊರೋನಾ ಇರತ್ತೆ. ಹೀಗಾಗಿ ಏನನ್ನೂ ಕೊಡುವುದಿಲ್ಲ. ಇಲ್ಲಿಂದ ಬೇಗ ಹೋಗಿ ಎಂದು ಅವಮಾನಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಆಂಬುಲೆನ್ಸ್ ಚಾಲಕ ಅಭಿಷೇಕ್ ಹೇಳಿದ್ದಾರೆ. ವಿಧಿಯಿಲ್ಲದೇ ಅಭಿಷೇಕ್ ನೀರು ಸಿಗದ್ದರಿಂದ ತಕ್ಷಣ ರಾಜೇಶ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ರಾಜೇಶ್ ಮೃತಪಟ್ಟಿದ್ದಾರೆ. ಅಂಗಡಿ ಮಾಲೀಕ ಮೆಲ್ವಿನ್ ಪಿಂಟೋ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!