Friday, July 1, 2022

ಬೀದಿ ದೀಪಗಳಿಗೆ ಇನ್ಮುಂದೆ ಒಂದೇ ಸ್ವಿಚ್!

Follow Us

newsics.com
ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ ಇನ್ಮುಂದೆ ಬೀದಿ ದೀಪಗಳು ಹಗಲು ಹೊತ್ತಿನಲ್ಲೂ ಉರಿಯುವುದು ನಿಲ್ಲಬಹುದು. ಈ ಮೂಲಕ ವಿದ್ಯುತ್ ನಷ್ಟ ಹಾಗೂ ಆರ್ಥಿಕ ನಷ್ಟ ಕೊನೆಯಾಗಬಹುದು.
ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ನಗರಗಳಲ್ಲಿ ಬೀದಿ ದೀಪಗಳನ್ನು ಒಂದೇ ಸ್ವಿಚ್ ಮೂಲಕ ನಿರ್ವಹಣೆ ಮಾಡಲು ಸರ್ಕಾರ ಮುಂದಾಗಿದೆ. ಸಾಫ್ಟ್‌ವೇರ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಯೋಜನೆಯ ಪ್ರಕಾರ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದೇ ಕಡೆ ಕುಳಿತು ಇಡೀ ನಗರದ ಬೀದಿ ದೀಪಗಳನ್ನು ಆಪರೇಟ್ ಮಾಡಬಹುದು. ಸಂಜೆ ಹೊತ್ತಿಗೆ ಬೀದಿ ದೀಪ ಆನ್ ಮಾಡಿದರೆ ಇಡೀ ನಗರದಲ್ಲಿನ ಬೀದಿ ದೀಪಗಳು ಉರಿಯುತ್ತವೆ. ನಂತರ ಬೆಳಗ್ಗೆ ಆಫ್ ಮಾಡಿದರೆ ನಗರದ ಎಲ್ಲಾ ಬೀದಿ ದೀಪಗಳು ಆಫ್ ಆಗುತ್ತವೆ.
ಈ ಯೋಜನೆಯನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ಹತ್ತು ಜಿಲ್ಲೆಗಳಲ್ಲಿ ಜಾರಿಗೆ ತರಲು ಚಿಂತನೆ ನಡೆದಿದೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು, ಮೈಸೂರು, ಕಲಬುರ್ಗಿ, ಬಳ್ಳಾರಿ ವಿಜಯಪುರ, ಮಂಗಳೂರು ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಎಲ್ಲಾ ಕಡೆ ಜಾರಿಗೆ ಬರಲಿದೆ.

ಚನ್ನಮ್ಮ ವೃತ್ತದಲ್ಲಿ ಉರುಳಿದ ಲಾರಿ

ಕೊಳವೆ ಬಾವಿಗೆ ಬಿದ್ದ ಮಗು: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಬಾನ ಬಣ್ಣ ಮಾಗಿ ಶಶಿ ಮೂಡುತಿಹನದೊ…

2 ವರ್ಷ ಸೋಶಿಯಲ್ ಮೀಡಿಯಾದಿಂದ ದೂರವಿರಲು ಕೋರ್ಟ್ ಸೂಚನೆ

ವಾಟ್ಸ್ಯಾಪ್ ಹೊಸ ಫೀಚರ್: ಏಳು ದಿನದಲ್ಲಿ ಮೆಸೇಜ್ ಮಾಯ

ಸಮುದ್ರ ತೀರದಲ್ಲಿ ವಿಹರಿಸುತ್ತಿರುವ ಪೋಟೋ ಶೇರ್ ಮಾಡಿದ ಪೂಜಾ ಹೆಗ್ಡೆ

ಅಮೆರಿಕದಲ್ಲಿ ಗಲಭೆ ಸಾಧ್ಯತೆ; ಎಲ್ಲೆಡೆ ಬಿಗಿ ಬಂದೋಬಸ್ತ್, ಟ್ರೆಂಡ್ ಆದ ಟ್ರಂಪ್

ಮತ್ತಷ್ಟು ಸುದ್ದಿಗಳು

vertical

Latest News

ನೀಟ್ ಪರೀಕ್ಷೆಗೆ ಹೆದರಿ ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿ ಆತ್ಮಹತ್ಯೆ

newsics.com ಚೆನ್ನೈ: ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅರ್ಹತೆಯ ಮಾನದಂಡವಾಗಿರುವ ನೀಟ್ ಪರೀಕ್ಷೆಗೆ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತಪಟ್ಟ ವಿದ್ಯಾರ್ಥಿಯನ್ನು  ಪಿ ಧನುಷ್ ಎಂದು ಗುರುತಿಸಲಾಗಿದೆ. ಧನುಷ್ ಬುಡಕಟ್ಟು...

ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ 14,413 ಮಂದಿ ಗುಣಮುಖರಾಗಿದ್ದಾರೆ.  ಕೇರಳ ಸಹಿತ...

ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ

newsics.com ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್  ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...
- Advertisement -
error: Content is protected !!