newsics.com
ಬೆಂಗಳೂರು: ನಗರದಲ್ಲಿ ಮಕ್ಕಳ ಮಾರಾಟ ಮಾಡುತ್ತಿದ್ದ ಆರು ಮಂದಿಯ ಗ್ಯಾಂಗ್ವೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಬಡವರಿಂದ ಕಡಿಮೆ ಬೆಲೆಗೆ ಮಕ್ಕಳನ್ನು ಖರೀದಿಸಿ ಬೇರೊಬ್ಬರಿಗೆ ಹೆಚ್ಚಿನ ಬೆಲೆಗೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಬಡವರಿಂದ 2-3 ಲಕ್ಷ ರೂ.ಗೆ ಮಕ್ಕಳನ್ನು ಖರೀದಿಸಿ ನಂತರ ಖರೀದಿ ಮಾಡಿದ್ದ ಮಕ್ಕಳ ಹೆತ್ತವರ ಹೆಸರನ್ನು ಮುಚ್ಚಿಟ್ಟು ಮತ್ತೊಬ್ಬ ಮಹಿಳೆಯನ್ನು ಮಗುವಿನ ತಾಯಿ ಎಂದು ನಂಬಿಸಿ ಮಗುವನ್ನು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 11 ಮಕ್ಕಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. 18-20 ಮಕ್ಕಳನ್ನು ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಷಣ್ಮುಗಮ್ಮ, ಮಹೇಶ್ ಕುಮಾರ್, ಜನಾರ್ದನ, ರಂಜನಾ, ದೇವಿಪ್ರಸಾದ, ಧನಲಕ್ಷ್ಮೀ ಬಂಧಿತ ಆರೋಪಿಗಳಾಗಿದ್ದು, ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.