ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖದಲ್ಲಿ ನಗು ಕಾಣಿಸಲೇ ಇಲ್ಲ. ಯಾವುದೊ ಗಂಭೀರ ಚಿಂತೆಯಲ್ಲಿದ್ದವರಂತೆ ಅವರು ಕಂಡು ಬರುತ್ತಿದ್ದರು. ರಾಜಕೀಯ ಒತ್ತಡ ಎದುರಿಸಿ ಸಚಿವ ಸಂಪುಟ ವಿಸ್ತರಣೆ ಕೈಗೊಂಡ ಯಡಿಯೂರಪ್ಪ ಅದ್ಯಾಕೊ ನಗುವುದನ್ನೇ ಮರೆತಂತೆ ಕಂಡು ಬಂದರು. ನೂತನ ಸಚಿವ ಸೋಮಶೇಖರ್, ಯಡಿಯೂರಪ್ಪ ಅವರ ಕಾಲಿಗೆರಗಿದಾಗ ಕೂಡ ಯಡಿಯೂರಪ್ಪ ಮುಖದಲ್ಲಿ ಯಾವುದೇ ಭಾವನೆ ಕಂಡು ಬರಲಿಲ್ಲ