ನವದೆಹಲಿ: ಉಡುಪಿಯಲ್ಲಿ ಸುರಿದ ಶತಮಾನದ ಮಳೆಯಲ್ಲಿ ತೊಂದರೆಗೆ ಸಿಲುಕಿದ್ದ ನೇಕಾರ ಕುಟುಂಬವೊಂದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ನೆರವಿನ ಹಸ್ತ ಚಾಚಿದ್ದಾರೆ. ಕಳೆದ 55 ವರ್ಷಗಳಿಂದ ನೇಕಾರಿಕೆಯಲ್ಲಿ ತೊಡಗಿರುವ ಉಡುಪಿಯ ಕಟಪಾಡಿಯ ಮಟ್ಟು ನಿವಾಸಿಯಾಗಿರುವ ಲಕ್ಷ್ಮಣ್ ಶೆಟ್ಟಿಗಾರ್ ಅವರ ಮನೆಗೆ ನೀರು ನುಗ್ಗಿತ್ತು.
ಯಕ್ಷಗಾನದಲ್ಲಿ ಬಳಸುವ ಸೀರೆ ತಯಾರಿಸುತ್ತಿರುವ ಲಕ್ಷ್ಮಣ್ ಮತ್ತು ಅವರ ಕುಟುಂಬ ಸದಸ್ಯರು ನೀರಿನಲ್ಲಿ ನಿಂತು ಕಣ್ಣೀರಿಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಇವತ್ತಿಗೂ ಕೇವಲ 400 ರೂಪಾಯಿ ಮಾತ್ರ ಅವರು ಸೀರೆಗೆ ಪಡೆಯುತ್ತಿದ್ದಾರೆ.
ಇದನ್ನು ಗಮನಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಕ್ಷಣ ಬೆಂಗಳೂರಿನಲ್ಲಿರುವ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೀಗ 1.20 ಲಕ್ಷ ರೂಪಾಯಿ ನೆರವು ಘೋಷಿಸಲಾಗಿದೆ. ಸ್ಥಳೀಯರು ಕೂಡ ಅವರಿಗೆ ಆರ್ಥಿಕ ಸಹಾಯ ನೀಡಿದ್ದಾರೆ.
ನೇಕಾರಿಕೆ ಮಾಡಲು ಪ್ರತ್ಯೇಕವಾದ ಶೆಡ್ ನಿರ್ಮಿಸಿಕೊಡಲು ಆದೇಶ ನೀಡಲಾಗಿದೆ.