newsics.com
ಶಿರಸಿ: ಅಡುಗೆ ವಿಚಾರದಲ್ಲಿ ಆರಂಭವಾದ ಗಲಾಟೆ ಇಬ್ಬರ ಪ್ರಾಣಕ್ಕೆ ಕುತ್ತು ತಂದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಿದ್ದಾಪುರ ದೊಡ್ಮನೆ ಕುಡೆಗೋಡಿ ಬಳಿ ಈ ಪ್ರಕರಣ ವರದಿಯಾಗಿದೆ.
ಆರೋಪಿ ಮಂಜುನಾಥ ಹಸ್ಲರ, ಅಡುಗೆ ವಿಷಯಕ್ಕೆ ಸಂಬಂಧಿಸಿದಂತೆ ತಾಯಿ ಪಾರ್ವತಿ ಹಸ್ಲರ್ ಮತ್ತು ತಂಗಿ ರಮ್ಯಾ ಹಸ್ಲರ್ ನನ್ನು ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಅಡುಗೆ ಯಾಕೆ ಮಾಡಿಲ್ಲ ಎಂದು ಜಗಳ ಆರಂಭಿಸಿದ ಮಂಜುನಾಥ್ ಬಳಿಕ ಇಬ್ಬರನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಪೊಲೀಸ್ ಅಧಿಕಾರಿ ರವಿ ನಾಯ್ಕ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.