Monday, April 12, 2021

ಬೆಂಗಳೂರಿನ ಭಾರಿ ಸದ್ದು ಸುಖೋಯ್ ಯುದ್ಧ ವಿಮಾನದ ಸೃಷ್ಟಿ

ಬೆಂಗಳೂರು: ಬೆಂಗಳೂರಿನ ಕೆಲ‌ಭಾಗಗಳಲ್ಲಿ ಬುಧವಾರ ಮಧ್ಯಾಹ್ನ ಕೇಳಿಬಂದ ನಿಗೂಢ ಸದ್ದಿನ ರಹಸ್ಯವನ್ನು ಎಚ್ ಎ ಎಲ್ ಬಹಿರಂಗಪಡಿಸಿದೆ.
ಸುಖೋಯ್ ಯುದ್ಧವಿಮಾನ ಟೇಕಾಫ್ ಆಗುವಾಗ ಇಂತಹ ಭಾರೀ ಸದ್ದು ಉಂಟಾಗಿದ್ದು, ಸುಮಾರು ಹತ್ತು ಕಿಮೀ ವರೆಗೂ ಈ ಸದ್ದು ಕೇಳಿದೆ ಎಂದು ಸ್ಪಷ್ಟಪಡಿಸಿದೆ.
ಎಚ್ ಎ ಎಲ್ ರನ್ ವೇ ನಲ್ಲಿ ಸುಖೋಯ್ 30 ಯುದ್ಧವಿಮಾನ 90 ಡಿಗ್ರಿಯಲ್ಲಿ ಟೇಕಾಫ್ ಆದಾಗ ಇಂತಹ ಸದ್ದು ಕೇಳಿಬಂದಿದೆ ಎಂದು ಎಚ್ ಎ ಎಲ್ ಹೇಳಿದೆ.
ಇಂತಹ ಸದ್ದನ್ನು ಸೋನಿಕ್ ಬೂಮ್ ಎಂದು ಕರೆಯುತ್ತಾರೆ ಎಂದು ಭಾರತೀಯ ವಾಯುಸೇನೆಯ ಮಾಜಿ ವಿಂಗ್ ಕಮಾಂಡರ್ ಸುದರ್ಶನ್ ಹೇಳಿದ್ದಾರೆ. ಫೈಟರ್ ವಿಮಾನ 1230 ಕಿಮೀ ವೇಗ ಪಡೆದಾಗ ಸಾಮಾನ್ಯವಾಗಿ ಈ ಸದ್ದು ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಸುಮಾರು 1.20ರ ಸುಮಾರಿಗೆ ಸ್ಪೋಟದಂತಹ ಈ ಶಬ್ದ ಬೆಂಗಳೂರಿನ ಬಹುತೇಕ ಕಡೆ ಕೇಳಿ ಬಂದಿದೆ. ಸರ್ಜಾಪುರ, ವೈಟ್‌ಫೀಲ್ಡ್, ಜೆ.ಪಿ.ನಗರ ಮೊದಲಾದ ಪ್ರದೇಶಗಳಲ್ಲಿ ಈ ಭಾರೀ ಸದ್ದು ಕೇಳಿ ಜನ ಆತಂಕಕ್ಕೀಡಾಗಿದ್ದರು.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!