newsics.com
ಕುಮಟಾ(ಉತ್ತರ ಕನ್ನಡ): ಕುಮಟಾದ ದೀವಗಿ ವೀರಾಂಜನೇಯ ಮಠದ ರಾಮಾನಂದ ಅವಧೂತ ಶ್ರೀಗಳು( 98) ಶನಿವಾರ ರಾತ್ರಿ ವಿಧಿವಶರಾದರು.
ಹೃದಯಾಘಾತಕ್ಕೊಳಗಾದ ಅವರನ್ನು ಕುಮಟಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ನಿನ್ನೆ ರಾತ್ರಿ 11ರ ಹೊತ್ತಿಗೆ ಇಹಲೋಕ ತ್ಯಜಿಸಿದರು.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರಾದ ಇವರ ಪೂರ್ವಾಶ್ರಮದ ಹೆಸರು ರಾಮಚಂದ್ರ ಹೆಗಡೆ.
ಶ್ರೀ ಸಹಜಾನಂದ ಸ್ವಾಮಿಗಳಿಂದ ತಮ್ಮ 22ನೇ ವಯಸ್ಸಿಗೆ ದೀಕ್ಷೆ ಪಡೆದು ಶ್ರೀ ರಾಮಾನಂದ ಅವಧೂತರಾದರು.
ಮೊದಲು ಸಿದ್ದಾಪುರ ತಾಲೂಕಿನ ಕೊಳಗಿಬೀಸ್ ನಲ್ಲಿ ನೆಲೆಸಿದ್ದ ಅವರು ಹಲವು ವರ್ಷಗಳ ನಂತರ ದೀವಗಿ ಮಠದಲ್ಲಿ ನೆಲೆಸಿದ್ದರು. ಲಕ್ಷಾಂತರ ಭಕ್ತರನ್ನು ಹೊಂದಿದ್ದರು.
ದೀವಗಿ ಮಠದ ರಾಮಾನಂದ ಅವಧೂತ ಶ್ರೀ ವಿಧಿವಶ
Follow Us