ಕಲಬುರ್ಗಿ: ರಾಜ್ಯದ ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಬಹುದಿನಗಳ ಕನಸು ಈಡೇರಿಸುವ ನಿಟ್ಟಿನಲ್ಲಿ ದೇವಿಯ ಮೊರೆ ಹೋಗಿದ್ದಾರೆ. ಯಾದಗಿರಿ ಜಿಲ್ಲೆಯ ಗಡೇ ದುರ್ಗಾ ದೇವಿಗೆ ಅವರು ಪತ್ರ ಬರೆದಿದ್ದಾರೆ. ದೇವಿ ದಯವಿಟ್ಟು ನನ್ನನ್ನು ಡಿಸಿಎಂ ಮಾಡು ಎಂದು ದೇವಿಗೆ ಪತ್ರ ಬರೆದು ಸಮರ್ಪಿಸಿದ್ದಾರೆ.
ಸ್ನೇಹಿತರು ಈ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದರು. ಇದು ಕಾರಣಿಕ ಸ್ಥಳ ಎಂದು ಹೇಳಿದ್ದರು. ಅದಕ್ಕಾಗಿ ದೇವಿ ದರ್ಶನ ಮಾಡಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಇಂದು ನವದೆಹಲಿಗೆ ತೆರಳುತ್ತಿದ್ದು, ರಾಜ್ಯದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾತು ಕೇಳಿ ಬರುತ್ತಿದೆ