newsics.com
ರಾಜ್ಯದಲ್ಲಿಂದು 2021-22ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ 8.53 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು ಇದರಲ್ಲಿ 85.53 ಪ್ರತಿಶತ ಫಲಿತಾಂಶ ಬಂದಿದೆ.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಸಂಪಾದಿಸಿದ್ದಾರೆ. ವಿಜಯಪುರ ಜಿಲ್ಲೆಯ ಅಮಿತ್ ಮಾದವ್, ತುಮಕೂರು ಜಿಲ್ಲೆಯ ಬಿ.ಆರ್ ಅನಘ, ಹಾಸನ ಜಿಲ್ಲೆಯ ಅರ್ಜುನ್ ನಾಯ್ಕ್, ಹಾವೇರಿ ಜಿಲ್ಲೆಯ ಪ್ರವೀಣ್ ನೀರಲಗಿ, ಬೆಳಗಾವಿಯ ಸಹನಾ, ಬಳ್ಳಾರಿ ಕವನಾ,ಶಿರಸಿಯ ಚಿರಾಗ್ ನಾಯ್ಕ್, ಮೈಸೂರಿನ ಏಕತಾ ಸೇರಿದಂತೆ ಒಟ್ಟು 145 ವಿದ್ಯಾರ್ಥಿಗಳು 625 ಅಂಕಗಳನ್ನು ಗಳಿಸಿದ್ದಾರೆ.