newsics.com
ಬೆಂಗಳೂರು: ನಿವೃತ್ತಿ ಪಡೆದ ನೌಕರರ ಪುನರ್ ನೇಮಕಾತಿ ರದ್ದು , ಸಹಾಯಕರ ಹುದ್ದೆ ಕಡಿತ ಪ್ರಸ್ತಾವನೆ ಕೈ ಬಿಡುವಂತೆ ಆಗ್ರಹಿಸಿ ವಿಧಾನಸೌದದ ಸಚಿವಾಲಯದ ನೌಕರರು ಮುಷ್ಕರ ನಡೆಸಿದ್ದಾರೆ. ಮುಷ್ಕರ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶವನ್ನು ಗಾಳಿಗೆ ತೂರಿದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಬೇಡಿಕೆ ಈಡೇರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಂಘವು ಹಲವು ಬಾರಿ ಮನವಿ ಸಲ್ಲಿಸಿತ್ತು. ಆದರೆ ಇದಕ್ಕೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರ ನಡೆಸಿದ್ದಾರೆ.