ಬೆಂಗಳೂರು: ಆ.16ರಿಂದ ನಮ್ಮ ಮೆಟ್ರೋ ಸೇವೆ ಆರಂಭವಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಸಿದ್ಧತೆ ಆರಂಭಿಸಿದೆ.
ಯಾವುದೇ ಸಂದರ್ಭದಲ್ಲಿ ಕೆಲಸಕ್ಕೆ ಬರಲು ತಯಾರಿರುವಂತೆ ಸಿಬ್ಬಂದಿಗೆ ಈಗಾಗಲೇ ಸೂಚಿಸಿದೆ. ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ.
ಲಾಕ್ಡೌನ್ ಅನ್ನು ಹಂತಹಂತವಾಗಿ ಸಡಿಲಿಕೆ ಮಾಡಿ ವಿಮಾನ, ರೈಲು, ಬಸ್ ಸೇರಿ ಇನ್ನಿತರ ಸಾರಿಗೆ ವ್ಯವಸ್ಥೆ ಪುನಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಆ.15ರಂದು ಲಾಕ್ಡೌನ್ ತೆರವಿನ ಕುರಿತ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಮೆಟ್ರೋ ರೈಲು, ಚಿತ್ರಮಂದಿರಗಳು ಸೇರಿ ಇನ್ನಿತರ ಉದ್ಯಮಗಳ ಕಾರ್ಯಚಟುವಟಿಕೆಗಳು ಆರಂಭವಾಗುವ ಸಾಧ್ಯತೆಗಳಿವೆ.
ಆ.16ರಿಂದ ನಮ್ಮ ಮೆಟ್ರೋ ಸೇವೆ ಆರಂಭ ಸಾಧ್ಯತೆ
Follow Us