ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಇತ್ತೀಚೆಗಷ್ಟೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹೆಚ್ ಡಿ ದೇವೇಗೌಡ ಅವರಿಗೆ ರಾಜ್ಯ ಸರ್ಕಾರ 60 ಲಕ್ಷ ರೂಪಾಯಿ ಮೌಲ್ಯದ ಕಾರು ನೀಡಿದೆ. ರಾಜ್ಯದಲ್ಲಿ ಸಂಚಾರ ನಡೆಸಲು ಈ ಕಾರನ್ನು ರಾಜ್ಯ ಸರ್ಕಾರ ಒದಗಿಸಿದೆ.
ಕೆಲವು ತಿಂಗಳ ಹಿಂದೆ ಹೊಸ ಕಾರು ನೀಡುವಂತೆ ದೇವೇ ಗೌಡ ಅವರು ಮನವಿ ಮಾಡಿದ್ದರು. ನಿರ್ದಿಷ್ಟ ಕಾರಿನ ಬಗ್ಗೆ ಪ್ರಸ್ತಾಪಿಸದಿದ್ದ್ರರೂ ಸರ್ಕಾರ ಅವರಿಗೆ ಅತ್ಯಾಧುನಿಕ ವೊಲ್ವೋ ಕಾರನ್ನು ನೀಡಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 75 ಲಕ್ಷ ರೂಪಾಯಿಗಳಾಗಿವ, ಸರ್ಕಾರವೇ ನೇರವಾಗಿ ಖರೀದಿಸಿರುವುದರಿಂದ ತೆರಿಗೆ ವಿನಾಯಿತಿ ದೊರೆತಿದೆ.
ದೇವೇಗೌಡ ಅವರ ಪ್ರಾಯ ಮತ್ತು ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ರಾಜ್ಯ ಸರ್ಕಾರ ಅವರ ಮನವಿಗೆ ಸಕಾರಾತ್ಮವಾಗಿ ಸ್ಪಂದಿಸಿದೆ ಎಂದು ಮೂಲಗಳು ಹೇಳಿವೆ,