newsics.com
ವಿಜಯನಗರ: ಕಲ್ಲು ಬಿದ್ದು ಮಗು ಸಾವನ್ನಪ್ಪಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಯಪುರ ಗ್ರಾಮದಲ್ಲಿ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ಶ್ರೀನಿವಾಸ್ ಭೇಟಿ ನೀಡಿದ್ದಾರೆ.
ತೇಜಸ್(4) ಮೃತ ರ್ದುದೈವಿ. ಶಾಂತಕುಮಾರ, ಮಲ್ಲೇಶ್ವರಿ ದಂಪತಿ ಕಡಪದಿಂದ ಮನೆ ಕಟ್ಟಿಕೊಂಡಿದ್ದರು. ಮನೆ ಪಕ್ಕದಲ್ಲಿ ತೆಂಗಿನ ಮರ ಇದ್ದು, ಎಮ್ಮೆ ಮನೆ ಪಕ್ಕದ ತೆಂಗಿನ ಮರದ ನಡುವೆ ಸಿಲುಕಿದೆ. ಈ ವೇಳೆ ಎಮ್ಮೆ ಉಜ್ಜಿದ ರಭಸದ ಪರಿಣಾಮ ಕಡಪದ ಗೊಡೆ ಬಿದ್ದು ಈ ದುರ್ಘಟನೆ ನಡೆದಿದೆ.
ಜಮೀರ್ ಅಹ್ಮದ್ ಹಾಗೂ ಶಾಸಕ ಶ್ರೀನಿವಾಸ್ ಭೇಟಿ ನೀಡಿ, ಮೃತ ಮಗು ಪೋಷಕರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸಚಿವ ಜಮೀರ್ ವೈಯಕ್ತಿಕ ಧನಸಹಾಯ ಮಾಡಿದರು.