newsics.com
ಬೆಳಗಾವಿ: ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪುಂಡಾಟಿಕೆ ಮುಂದುವರಿದಿದೆ. ರಾಜ್ಯದ ಸಾರಿಗೆ ಬಸ್ ನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆಯಿಂದ ರಾಜ್ಯದ ಅಥಣಿಗೆ ಬರುತ್ತಿದ್ದ ಬಸ್ ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಿರಜ್- ಕಾಗವಾಡ ಮಧ್ಯೆ ಈ ಘಟನೆ ಸಂಭವಿಸಿದೆ.
ಇದೀಗ ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆಯಂತೆ ಗೆ ಮಿರಜ್ ಮಾರ್ಗವಾಗಿ ಸಂಚರಿಸುವ ರಾಜ್ಯದ ಎಲ್ಲಾ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕಲ್ಲು ತೂರಾಟದಿಂದ ಅಥಣಿ ಡಿಪೋಗೆ ಸೇರಿದ್ದ ಬಸ್ನ ಮುಂದಿನ ಗಾಜು ಪುಡಿಯಾಗಿದೆ.
ಈ ಮಧ್ಯೆ ರಾಜ್ಯದ ಬಸ್ ಗಳಿಗೆ ಸೂಕ್ತ ಭದ್ರತೆ ನೀಡುವಂತೆ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.