ಮಂಗಳೂರು: ಬೀದಿ ನಾಯಿಗಳ ಹಿಂಡು ದಾಳಿಗೆ ಪಿಲಿಕುಳ ಜೈವಿಕ ಉದ್ಯಾನವನದ 10 ಬಾರ್ಕಿಂಗ್ ಡೀರ್ (ಕಾಡುಕುರಿ) ಗಳು ಸಾವನ್ನಪ್ಪಿವೆ.
ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನಿಸರ್ಗಧಾಮದ ಆವರಣದ ಗೋಡೆ ಕುಸಿದಿದೆ. ಈ ಮೂಲಕ ಕಾಡುಕುರಿ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ. ಈ ದಾಳಿಯಿಂದ ಹತ್ತು ಕಾಡುಕುರಿಗಳು ಸಾವನ್ನಪ್ಪಿ, 5ಕ್ಕೂ ಹೆಚ್ಚಿನ ಕಾಡುಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ನಿಸರ್ಗಧಾಮದೊಳಗೇ ಜಿಂಕೆಗಳ ಮೇಲೆ ದಾಳಿ ನಡೆದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿ 40 ಕಾಡುಕುರಿಗಳು ಇದ್ದವು. ಹತ್ತು ಕುರಿಗಳು ಸಾವನ್ನಪ್ಪಿವೆ. ಗಾಯಗೊಂಡಿರುವ ಕಾಡುಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಈ ಹಿಂದೆಯೇ ಬಾರ್ಕಿಂಗ್ ಡೀರ್ ಗಳನ್ನು ಕಾಡಿಗೆ ಬಿಡಲು ಚಿಂತನೆ ನಡೆಸಿದ್ದೆವು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಹೇಳಿದ್ದಾರೆ.