newsics.com
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ ಇತ್ತೀಚೆಗೆ BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು.
ಈ ಕಾರನ್ನು ಸುದೀಪ್ ಅವರಿಗೆ ತೋರಿಸಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಬ್ರೋ ಗೌಡ ಆಸೆ ಆಗಿತ್ತು.
ಕಿಚ್ಚ ಸುದೀಪ್ ಅವರು ಬಿಡುವು ಮಾಡಿಕೊಂಡು ಶಮಂತ್ ಬ್ರೋ ಗೌಡ ಅವರ ಕಾರನ್ನು ಓಡಿಸಿದ್ದಾರೆ.ಶಮಂತ್ ಅವರು ತಮ್ಮ ಬಿಎಂಡಬ್ಲ್ಯೂ ಕಾರನ್ನು ಸುದೀಪ್ ಮನೆಗೆ ತಂದಿದ್ದಾರೆ. ಕಾರಿನ ಮೇಲೆ ಸುದೀಪ್ ಆಟೋಗ್ರಾಫ್ ಕೂಡ ಹಾಕಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ.