ಬೆಂಗಳೂರು: ತಮ್ಮ ಪ್ರೀತಿಯ ನಾಯಿ ಗೋಪಿ ಕುರಿತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಹಾಗೂ ಲೇಖಕಿ ಸುಧಾಮೂರ್ತಿ ಅವರು ಬರೆದ ಪುಸ್ತಕವನ್ನು ಅದೇ ನಾಯಿ ಮೂಲಕವೇ ಬಿಡುಗಡೆಗೊಳಿಸಲಾಯಿತು.
ಬೆಂಗಳೂರಿನ ಅಶೋಕನಗರದಲ್ಲಿ ನಡೆದ ಸಮಾರಂಭದಲ್ಲಿ ‘ದ ಗೋಪಿ ಡೈರೀಸ್- ಕಮಿಂಗ್ ಹೋಮ್’ ಪುಸ್ತಕವನ್ನು ಸುಧಾಮೂರ್ತಿ ಅವರ ಅಣತಿಯಂತೆ ಗೋಪಿ ರಿಬ್ಬನ್ ಎಳೆದು ಪುಸ್ತಕ ಬಿಡುಗಡೆಗೊಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಬಳಿಕ ಮಾತನಾಡಿದ ಸುಧಾಮೂರ್ತಿ ಅವರು, ಪ್ರೀತಿಯ ನಾಯಿ ಗೋಪಿಯ ಜತೆಗಿನ ಬಾಂಧವ್ಯದ ಬಗ್ಗೆ ವಿವರಿಸಿದರು. ಇನ್‍ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಪುಸ್ತಕದ ಸಂಪಾದಕಿ ಶೃತಕೀರ್ತಿ ಖುರಾನ ಸೇರಿ ಹಲವರು ಪಾಲ್ಗೊಂಡಿದ್ದರು.
ಸುಧಾಮೂರ್ತಿ ಅವರ ಪುಸ್ತಕ ಬಿಡುಗಡೆಗೊಳಿಸಿದ ನಾಯಿ!
Follow Us