newsics.com
ಬೆಂಗಳೂರು: ನಿರ್ಮಾಪಕರು ಮತ್ತು ವಿತರಕರ ಮಧ್ಯೆ ಹಣಕಾಸಿನ ವಿವಾದ ತಲೆದೋರಿದ್ದು, ಇಂದು ನಟ ಸುದೀಪ್ ಅಭಿನಯನದ ಕೋಟಿಗೊಬ್ಬ- 3 ಚಿತ್ರದ ಮುಂಜಾನೆ ಪ್ರದರ್ಶನ ರದ್ದುಗೊಂಡಿದೆ.
ಇದೀಗ ಬಿಕ್ಕಟ್ಟು ಬಗೆಹರಿಸಲು ನಟ ಸುದೀಪ್ ಅವರು ಮಧ್ಯ ಪ್ರವೇಶಿಸಿದ್ದಾರೆ. ಮುಂಜಾನೆಯ ಪ್ರದರ್ಶನ ರದ್ದಾಗಿದೆ. ಮಧ್ಯಾಹ್ನದ ಬಳಿಕ ಸಮಸ್ಯೆ ಬಗೆಹರಿಯುವ ವಿಶ್ವಾಸವನ್ನು ಚಿತ್ರ ತಂಡ ವ್ಯಕ್ತಪಡಿಸಿದೆ.
ಮುಂಜಾನೆ ಫಸ್ಟ್ ಡೇ ಫಸ್ಟ್ ಶೋ ನೋಡಲು ಚಿತ್ರಮಂದಿರಗಳಿಗೆ ಸುದೀಪ್ ಅವರ ಅಪಾರ ಬೆಂಬಲಿಗರು ಆಗಮಿಸಿದ್ದರು.