ಬೆಂಗಳೂರು: ಮಾರಕ ಕೊರೋನಾ ತಡೆಗಟ್ಟುವ ಸಂಬಂಧ ರಾಜ್ಯ ಸರ್ಕಾರ ಘೋಷಿಸಿರುವ 33 ಗಂಟೆಗಳ ಸಂಡೇ ಲಾಕ್ ಡೌನ್ ಕಟ್ಟು ನಿಟ್ಟಾಗಿ ಜಾರಿಯಲ್ಲಿದೆ. ಬೆಂಗಳೂರು ನಗರದಲ್ಲಿ ಜನಜೀವನ ಬಹುತೇಕ ಸ್ತಬ್ಧಗೊಂಡಿದೆ. ಮೆಜೆಸ್ಟಿಕ್ ಪರಿಸರ ಪ್ರದೇಶ ಬಿಕೊ ಎನ್ನುತ್ತಿದೆ. ಅಂಗಡಿಗಳು ಬಾಗಿಲು ಮುಚ್ಚಿವೆ. ಕೆಲವೇ ಕೆಲವು ಹೂವಿನ ವ್ಯಾಪಾರಿಗಳು ಮುಂಜಾನೆ ನಗರದಲ್ಲಿ ವ್ಯಾಪಾರ ನಿರತರಾಗಿದ್ದಾರೆ. ಮಾರಕ ಕೊರೋನಾ ತ಼ಡೆಗಟ್ಟಲು ಜನರು ಪೂರ್ಣ ಸಹಕಾರ ನೀಡುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ 1172 ಕೊರೋನಾ ಪ್ರಕರಣ ವರದಿಯಾಗಿತ್ತು. 25 ಮಂದಿ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದರು. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಸಂಡೇ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಿಜಯಪುರದಲ್ಲಿ ಲಾಕ್ ಡೌನ್ ಕರೆಗೆ ಜನರು ಸ್ಪಂದಿಸಿದ್ದಾರೆ. ಚಿತ್ರದುರ್ಗದಲ್ಲಿ ಕೆಲವು ಮಂದಿ ಬೆಳಿಗ್ಗೆ ಓಡಾಟ ನಡೆಸುತ್ತಿರುವ ದೃಶ್ಯ ಕಂಡು ಬಂತು. ಮನೆಯಿಂದ ಹೊರಬಂದು ಅನಗತ್ಯವಾಗಿ ರಸ್ತೆಗಿಳಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.