ಮೈಸೂರು: 22ನೇ ಮೇಯರ್ ಆಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ತಸ್ನೀಮ್ ಹಾಗೂ ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಮುಸ್ಲಿಂ ಮೇಯರ್ ಎನಿಸಿದ್ದಾರೆ.
ಶನಿವಾರ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆದಿದ್ದು, ಜೆಡಿಎಸ್ ಅಭ್ಯರ್ಥಿ ಮೈಸೂರು ಮಹಾನಗರ ಪಾಲಿಕೆ 29 ನೇ ವಾರ್ಡ್ ಸದಸ್ಯೆ ತಸ್ನೀಮ್ ಅವರು 47 ಮತ ಪಡೆಯುವ ಮೂಲಕ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.