newsics.com
ಬೆಂಗಳೂರು: ಟಾಟಾ ಮೋಟಾರ್ಸ್ ಕಂಪೆನಿಯು ಹ್ಯಾಚ್ಬ್ಯಾಕ್ನ ಹೊಸ ಎಕ್ಸ್ಟಿಎ ರೂಪಾಂತರವಾದ ಟಾಟಾ ಟಿಯಾಗೊವನ್ನು ಬಿಡುಗಡೆ ಮಾಡಿದೆ.ಈ ಮೂಲಕ ಸ್ವಯಂ ಚಾಲಿತ ಮ್ಯಾನ್ಯುವಲ್ ಟ್ರಾನ್’ಮಿಷನ್ ಆವೃತ್ತಿಯ ಆಯ್ಕೆಯ ಶ್ರೇಣಿಯನ್ನು 4 ಎಂಎಂಟಿಗೆ ಬಲಪಡಿಸುತ್ತಿದೆ.
ಈ ಕಾರಿನ ಆರಂಭಿಕ ಬೆಲೆಯನ್ನು 5.99ಲಕ್ಷ ನಿಗದಿಪಡಿಸಿದೆ.
ಈ ಕುರಿತು ಮಾರ್ಕೆಟಿಂಗ್ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ ಮಾತನಾಡಿ ಟಿಯಾಗೊ, ವಲಯಗಳಾದ್ಯಂತ ಅಪಾರವಾದ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆದಿದೆ. ಇದಲ್ಲದೆ, ಭಾರತದಲ್ಲಿ ಸ್ವಯಂಚಾಲಿತ ಪ್ರಸರಣ (ಎಟಿ) ವಿಭಾಗವು ಪ್ರವರ್ಧಮಾನಕ್ಕೆ ಬರುತ್ತಿದೆ ಮತ್ತು ಟಿಯಾಗೊ ಮಾರಾಟದಲ್ಲೂ ಇದು ಸಾಬೀತಾಗಿದೆ. ಸದಾ ಹೊಸತಾಗಿ ಉಳಿಯುವ ನಮ್ಮ ಬ್ರಾಂಡ್ ಭರವಸೆಯನ್ನು ಈಡೇರಿಸುತ್ತಾ , ನಿರಂತರವಾಗಿ ಮಾರುಕಟ್ಟೆಯಿಂದ ಪ್ರತಿಕ್ರಿಯೆ ಪಡೆಯುತ್ತೇವೆ ಎಂದಿದ್ದಾರೆ.
ನಿಮಿಷಕ್ಕೆ 300ಇಟ್ಟಿಗೆಗಳನ್ನು ತಯಾರಿಸುವ ಸ್ವಯಂ ಚಾಲಿತ ಬ್ರಿಕ್ ಮೇಕಿಂಗ್ ಮಷಿನ್