Tuesday, January 19, 2021

ಬೆತ್ತಲೆ ಫೋಟೋ ಹೆಸರಿನಲ್ಲಿ ಹಣ ದೋಚುತ್ತಿದ್ದ ಇಬ್ಬರ ಬಂಧನ

newsics.com
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಹಲವರನ್ನು ಪರಿಚಯ ಮಾಡಿಕೊಂಡು ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಗೋಕಲ್ ರಾಜ್ ಹಾಗೂ ಪವನ್ ಬಂಧಿತ ಯುವಕರು. 20ರ ಹರೆಯದ ಈ ಯುವಕರು ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಜನರಿಗೆ ವಂಚಿಸಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಹಣ ನೀಡದಿದ್ದರೆ ಪೊಲೀಸ್​ ಕಮಿಷನರ್​ ಹೆಸರಿನಲ್ಲಿ ಅವರಿಗೆ ಕರೆ ಮಾಡಿ ಬೆದರಿಸಿ ಆರೋಪಿಗಳು ಹಣ ವಸೂಲಿ ಮಾಡುತ್ತಿದ್ದರು. ಇದೇ ರೀತಿ ಹಲವರಿಗೆ ಮೋಸ ಮಾಡಿದ ಈ ಯುವಕರು ಲಕ್ಷಗಟ್ಟಲೆ ಹಣ ದೋಚಿದ್ದಾರೆ. ‘ಸಾಕ್ಷಿ ರಾಜ್’ ಎನ್ನುವ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿದ್ದರು. ಈ ಖಾತೆಯಲ್ಲಿನ ಸುಂದರ ಹುಡುಗಿಯ ಫೋಟೋ ನೋಡಿ ಅನೇಕರು ರಿಕ್ವೆಸ್ಟ್​ ಕಳುಹಿಸುತ್ತಿದ್ದರು. ಅಲ್ಲದೇ ಇವರು ಕೂಡ ಹಲವರಿಗೆ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಚಾಟಿಂಗ್​ ನಡೆಸಿ, ಬೆತ್ತಲೆ ಫೋಟೋ ಕಳುಹಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಫೇಸ್​ಬುಕ್​ ಫ್ರೆಂಡ್​ನಿಂದಲೂ ಬೆತ್ತಲೆ ಫೋಟೋ ಪಡೆಯುತ್ತಿದ್ದರು. ಈ ಫೋಟೋ ಸಿಕ್ಕ ಬಳಿಕ ಅವರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇಲ್ಲದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹರಿಯಬಿಡುವ ಬೆದರಿಕೆ ಹಾಕುತ್ತಿದ್ದರು.
ಮಂಗಳೂರಿನ ಉದ್ಯಮಿಯೊಬ್ಬರಿಗೆ ಸಾಕ್ಷಿ ರಾಜ್ ಹೆಸರಿನಲ್ಲಿ ಮೆಸೇಜ್ ಮಾಡಿದ್ದಾರೆ. ಬೆತ್ತಲೆ ಫೋಟೊ ಕಳುಹಿಸಿ ಉದ್ಯಮಿಯ ಬೆತ್ತಲೆ ಫೋಟೊ ಸೆಂಡ್ ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ ಇನ್ನು ಮಂಗಳೂರು ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಎಂದು ಅವರಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಸಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಬೆದರಿದ ಉದ್ಯಮಿ ಹಣ ನೀಡಿದ್ದಾರೆ. ಮತ್ತೆ ಮತ್ತೆ ಹಣದ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೆಸತ್ತ ಉದ್ಯಮಿ ಕದ್ರಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಸೈಬರ್​ ಕ್ರೈಂ ಪೊಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆ ನಡೆಸಿದಾಗ ಈ ಮೋಸದಾಟ ಬಯಲಾಗಿದೆ. ಬೆಂಗಳೂರಿನ ಸಾಕಷ್ಟು ಜನರಿಗೆ ಇದೇ ರೀತಿ ಇವರು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಶವ ಪತ್ತೆ!

ತಡರಾತ್ರಿ 2ಕ್ಕೆ ನೆಲಕ್ಕೆ ಅಪ್ಪಳಿಸಲಿರುವ ನಿವಾರ್

ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಶವ ಪತ್ತೆ!

ಮತ್ತಷ್ಟು ಸುದ್ದಿಗಳು

Latest News

ಕಬ್ಬನ್’ಪಾರ್ಕ್’ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯ ಆರಂಭ

newsics.com ಬೆಂಗಳೂರು: ಸುಮಾರು ಒಂದು ವರ್ಷದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿ ಕೆಲಸ ಭಾನುವಾರ (ಜ.17) ಪ್ರಾರಂಭವಾಗಿದೆ. ಸದ್ಯ ಉದ್ಯಾನವನದ ಮೂಲಕ 4 ಕಿ.ಮೀ ನಡಿಗೆ...

ಮಾರ್ಚ್‌ ಮೊದಲ ವಾರ ಬಜೆಟ್- ಸಿಎಂ

newsics.com ಕುಂದಾಪುರ(ಉಡುಪಿ): ಮಾರ್ಚ್‌ ಮೊದಲ ವಾರ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮಂಗಳವಾರ ಗಣಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯ ಧಾರ್ಮಿಕ ಪ್ರವಾಸದಲ್ಲಿ ಸಕಾಲಕ್ಕೆ...

ಸಸ್ಯಾಹಾರಿಗಳಿಗೆ ಕೊರೋನಾ ಸೋಂಕಿನ ಅಪಾಯ ಕಡಿಮೆ-ವರದಿ

newsics.com ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ಸುಮಾರು 40 ಸಂಸ್ಥೆಗಳಲ್ಲಿ ನಡೆಸಿದ ಹೊಸ ಸಮೀಕ್ಷೆಯಲ್ಲಿ, ಧೂಮಪಾನಿಗಳು ಮತ್ತು ಸಸ್ಯಾಹಾರಿಗಳಲ್ಲಿ ಕಡಿಮೆ ಸಿರೊಪೊಸಿಟಿವಿಟಿ ಹೊಂದಿರುವುದು ಕಂಡುಬಂದಿದ್ದು, ಅವರು ಕೊರೋನಾವೈರಸ್...
- Advertisement -
error: Content is protected !!