Friday, January 22, 2021

ಯೇಸು ಪ್ರತಿಮೆ ನಿರ್ಮಾಣ; ಭೂ ತನಿಖೆಗೆ ಸರ್ಕಾರ ನಿರ್ಧಾರ

ಉಡುಪಿ: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಯಾವ ಜಮೀನಿನಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಡಿಕೆ ಶಿವಕುಮಾರ್​ ಜಮೀನನ್ನು ತಮ್ಮ ಸ್ವಂತ ಹಣದಲ್ಲಿ ಖರೀದಿಸಿದ್ದಾಗಿ ಹೇಳಿದ್ದಾರೆ, ಆದರೆ, ಇದು ಯಾವ ಜಮೀನು ಎಂದು ತಿಳಿದಿಲ್ಲ. 2017-18ರಲ್ಲಿ ಸರ್ಕಾರದಿಂದ ಬೇಕಾಬಿಟ್ಟಿಯಾಗಿ ಜಮೀನು ಹಂಚಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರವಿದ್ದಾಗ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿರುವ 16 ಎಕರೆ ಜಮೀನಿನಲ್ಲಿ 10 ಎಕರೆ ಭೂಮಿಯನ್ನು ತಮ್ಮ ಸ್ವಂತ ಹಣ ನೀಡಿ ಹಕ್ಕುಪತ್ರ ಪಡೆದಿದ್ದೇನೆ ಎಂದು ಡಿಕೆ ಶಿವಕುಮಾರ್​ ತಿಳಿಸಿದ್ದರು. ಆದರೆ ಈ ಜಮೀನಿನ ಬಗ್ಗೆ ಹಾರೋಬೆಲೆಯಲ್ಲಿಯೇ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಮೆ ನಿರ್ಮಾಣವಾಗುತ್ತಿರುವ ಜಮೀನು ಗೋಮಾಳದ ಜಮೀನಾಗಿದೆ ಎಂದು ಕೆಲವರು ವಾದಿಸಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಕಪಾಲಬೆಟ್ಟದ 10 ಎಕರೆ ಪ್ರದೇಶದಲ್ಲಿ 114 ಅಡಿ ಎತ್ತರದ ಯೇಸು ಕ್ರೈಸ್ತರ ಪ್ರತಿಮೆ ನಿರ್ಮಾಣಕ್ಕೆ ಕ್ರಿಸ್ಮಸ್ ದಿನ ಡಿಕೆಶಿ ಅಡಿಗಲ್ಲು ಹಾಕಿದ್ದರು. ಇದು ಪೂರ್ಣಗೊಂಡರೆ ವಿಶ್ವದ ಅತಿ ಎತ್ತರದ ಯೇಸು ಪ್ರತಿಮೆ ಎನಿಸಲಿದೆ.

ಮತ್ತಷ್ಟು ಸುದ್ದಿಗಳು

Latest News

ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್’ಗೆ ಝಡ್ ಪ್ಲಸ್ ಭದ್ರತೆ

newsics.com ನವದೆಹಲಿ:ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ (66) ಅವರಿಗೆ ದೇಶದೆಲ್ಲೆಡೆ ಸಂಚರಿಸಲು ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ. ಈ ಕುರಿತು ಗೃಹ...

ಶಿವಮೊಗ್ಗ ದುರಂತ: ಮೃತ ನಾಲ್ವರ ಗುರುತು ಪತ್ತೆ

newsics.com ಶಿವಮೊಗ್ಗ: ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ನಡೆದ ಜೆನೆಟಿಲ್ ಸ್ಫೋಟದಲ್ಲಿ ಮೃತಪಟ್ಟವರ ನಾಲ್ವರ ಗುರುತು ಪತ್ತೆಮಾಡಲಾಗಿದೆ. ಮೃತರನ್ನು ಭದ್ರಾವತಿಯ ಪ್ರವೀಣ ಕುಮಾರ್, ಮಂಜಪ್ಪ ,ಜಾವೇದ್ ಹಾಗೂ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಜಾವೇದ್ ಹಾಗೂ ಪವನ್...

ಬಿಜೆಪಿ ಸರ್ಕಾರದ ವಿರುದ್ಧ ಟೀಕೆ; ಪೊಲೀಸರಿಂದ ಹಂಪನಾ ವಿಚಾರಣೆ

newsics.com ಮಂಡ್ಯ: ಬಿಜೆಪಿ ಕಾರ್ಯಕರ್ತರ ಹಿನ್ನೆಲೆಯಲ್ಲಿ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.ಬಿಜೆಪಿ ಸರ್ಕಾರವನ್ನು ಆಕ್ಷೇಪಾರ್ಹ ಮಾತುಗಳಿಂದ ಟೀಕಿಸಿದ್ದಾರೆ ಎಂಬ ಆರೋಪದ ಮೇಲೆ ಹಂ.ಪ.ನಾ. ಅವರನ್ನು ಮಂಡ್ಯ...
- Advertisement -
error: Content is protected !!